ಎವರೆಸ್ಟ್, ಎಂಡಿಎಚ್ ಮಸಾಲಾ ಉತ್ಪನ್ನಗಳಿಗೆ ಹಾಂಕಾಂಗ್ ನಿಷೇಧ
Update: 2024-04-22 21:42 IST
ಹಾಂಕಾಂಗ್ : ಭಾರತದ ಜನಪ್ರಿಯ ಮಸಾಲಾ ಉತ್ಪನ್ನಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲಾ ಪುಡಿಗಳ ಮಾರಾಟವನ್ನು ನಿಷೇಧಿಸಿರುವುದಾಗಿ ಹಾಂಕಾಂಗ್ ಘೋಷಿಸಿದೆ. ಕಳೆದ ವಾರ ಸಿಂಗಾಪುರ ಆಡಳಿತವೂ ಇದೇ ಕ್ರಮವನ್ನು ಕೈಗೊಂಡಿತ್ತು.
ಈ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ರಾಸಾಯನಿಕ ಕಂಡುಬಂದಿರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಹಾಂಕಾಂಗ್‍ನ ಆಹಾರ ಸುರಕ್ಷತಾ ಘಟಕ (ಸಿಎಫ್‍ಎಸ್) ಹೇಳಿದೆ. ಎಂಡಿಎಚ್‍ನ ಮದ್ರಾಸ್ ಕರಿ ಪೌಡರ್, ಮಿಕ್ಸೆಡ್ ಮಸಾಲಾ ಪೌಡರ್ ಮತ್ತು ಸಾಂಬಾರ್ ಮಸಾಲಾದಲ್ಲಿ ಮತ್ತು ಎವರೆಸ್ಟ್‍ನ ಫಿಶ್‍ಕರಿ ಪೌಡರ್‍ನಲ್ಲಿ ಅನುಮತಿಸಿರುವುದಕ್ಕಿಂತ ಅಧಿಕ ಮಟ್ಟದ ಎಥಿಲಿನ್ ಆಕ್ಸೈಡ್ ರಾಸಾಯನಿಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಎಂದು ಸಿಎಫ್‍ಎಸ್ ಹೇಳಿದೆ.