×
Ad

ಶ್ರೀಲಂಕಾ: ಹೆಲಿಕಾಪ್ಟರ್ ಪತನ 6 ಮಿಲಿಟರಿ ಸಿಬ್ಬಂದಿ ಮೃತ್ಯು

Update: 2025-05-09 22:42 IST

PC : PTI 

ಕೊಲಂಬೋ: ಶ್ರೀಲಂಕಾ ವಾಯುಪಡೆಯ ಹೆಲಿಕಾಪ್ಟರ್ ಶುಕ್ರವಾರ ಜಲಾಶಯಕ್ಕೆ ಪತನಗೊಂಡಿದ್ದು ವಿಮಾನದಲ್ಲಿದ್ದ 6 ಮಿಲಿಟರಿ ಸಿಬ್ಬಂದಿ ಮೃತಪಟ್ಟಿರುವುದಾಗಿ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

ಮಡುರು ಓಯಾ ಪ್ರಾಂತದಲ್ಲಿ ಸೇನೆಯ ವಿಶೇಷ ಪಡೆಗಳ ತುಕಡಿ ವೈಮಾನಿಕ ಕಸರತ್ತು ನಡೆಸುತ್ತಿದ್ದಾಗ ದುರಂತ ಸಂಭವಿಸಿದೆ. ಕಡಿಮೆ ಎತ್ತರದಲ್ಲಿ ಚಲಿಸುವ ಹೆಲಿಕಾಪ್ಟರ್‍ನಿಂದ ನೆಲಕ್ಕೆ ಜಿಗಿಯುವ ಕಸರತ್ತು ಪ್ರದರ್ಶನ ಸಂದರ್ಭ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಸರೋವರಕ್ಕೆ ಪತನಗೊಂಡಿದೆ. ಹೆಲಿಕಾಪ್ಟರ್‍ನಲ್ಲಿ 12 ಮಂದಿಯಿದ್ದು ವಾಯುಪಡೆಯ ಇಬ್ಬರು ಹಾಗೂ ವಿಶೇಷ ಪಡೆಗಳ ನಾಲ್ವರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿದೆ. ದುರಂತದ ಬಗ್ಗೆ ತನಿಖೆ ನಡೆಸಲು 9 ಸದಸ್ಯರ ಸಮಿತಿಯನ್ನು ರಚಿಸಿರುವುದಾಗಿ ಶ್ರೀಲಂಕಾ ವಾಯುಪಡೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News