×
Ad

ಯೆಮನ್: ಅಮೆರಿಕದ ದಾಳಿಯಲ್ಲಿ 6 ಮಂದಿ ಸಾವು, 26 ಮಂದಿಗೆ ಗಾಯ

Update: 2025-04-14 20:55 IST

Photo Credit: Reuters

ಸನಾ: ಯೆಮನ್ ನಲ್ಲಿ ಹೌದಿ ಬಂಡುಕೋರರ ನಿಯಂತ್ರಣದಲ್ಲಿರುವ ರಾಜಧಾನಿ ಸನಾದ ಸುತ್ತಮುತ್ತಲಿನ ಪ್ರದೇಶದ ಮೇಲೆ ರವಿವಾರ ರಾತ್ರಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು ಇತರ 26 ಮಂದಿ ಗಾಯಗೊಂಡಿರುವುದಾಗಿ ಹೌದಿ ಮೂಲಗಳು ಸೋಮವಾರ ಹೇಳಿವೆ.

ರಾಜಧಾನಿ ಸನಾದ ನೆರೆಹೊರೆಯ ಬನಿ ಮತಾರ್ ನಗರದ ಸೆರಾಮಿಕ್ಸ್ ಫ್ಯಾಕ್ಟರಿಯ ಮೇಲೆ ವೈಮಾನಿಕ ದಾಳಿ ನಡೆದಿದ್ದು ಫ್ಯಾಕ್ಟರಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಹಾಗೂ ಸಮೀಪದ ಇತರ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ. ಇದೇ ವೇಳೆ, ಅಮೆರಿಕದ ಮತ್ತೊಂದು ಎಂಕ್ಯು-ರೀಪರ್ ಡ್ರೋನ್ ಅನ್ನು ಸ್ಥಳೀಯವಾಗಿ ಉತ್ಪಾದಿಸಿದ ಕ್ಷಿಪಣಿ ಬಳಸಿ ಹೊಡೆದುರುಳಿಸಿರುವುದಾಗಿ ಹೌದಿಗಳ ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News