×
Ad

ತಾತ್ಕಾಲಿಕ ಯುದ್ಧವಿರಾಮ, ರಾಜಕೀಯ ಗೆಲುವು: ಹಮಾಸ್ ಪ್ರತಿಕ್ರಿಯೆ

Update: 2023-11-25 22:59 IST

Photo: X//EA_WorldView

ಗಾಝಾ: ಗಾಝಾದಲ್ಲಿ ತಾತ್ಕಾಲಿಕ ಯುದ್ಧವಿರಾಮ ಒಪ್ಪಂದ ಏರ್ಪಟ್ಟಿರುವುದು ತನಗೆ ದೊರೆತ ರಾಜಕೀಯ ಮತ್ತು ಮಿಲಿಟರಿ ಗೆಲುವಾಗಿದೆ ಎಂದು ಹಮಾಸ್ ಮುಖ್ಯಸ್ಥರು ಹೇಳಿದ್ದಾರೆ.

ಸಂಘರ್ಷದ ಸಮಯದಲ್ಲಿ ಫೆಲೆಸ್ತೀನಿಯನ್ ಜನತೆಯನ್ನು ನಿರಂತರ ಬೆಂಬಲಿಸುತ್ತಿರುವ ಇರಾನ್ಗೆ ಹಮಾಸ್ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಮಧ್ಯೆ, ಕದನ ವಿರಾಮದ 2ನೇ ದಿನವಾದ ಶನಿವಾರ 42 ಫೆಲೆಸ್ತೀನಿಯನ್ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡುತ್ತಿದ್ದು ಹಮಾಸ್ 14 ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಒಪ್ಪಂದದ ಪ್ರಕಾರ ಮಹಿಳೆಯರು ಸೇರಿದಂತೆ 42 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲ್ ಜೈಲು ಪ್ರಾಧಿಕಾರ ಶನಿವಾರ ಹೇಳಿದೆ. 3 ಫೆಲೆಸ್ತೀನಿಯನ್ ಕೈದಿಗಳಿಗೆ ಒಬ್ಬ ಒತ್ತೆಯಾಳು ಬಿಡುಗಡೆ ಎಂಬ ಅನುಪಾತದಲ್ಲಿ ಒಪ್ಪಂದ ಕಾರ್ಯಗತಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News