ಮೊಹಮ್ಮದ್ ಬಾಘರ್ ಘಾಲಿಬಾಫ್ | Photo Credit : AP 

ಟೆಹರಾನ್: ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶವು ಅಮೆರಿಕನ್ನರು ಇರಾನ್ ಯುದ್ಧವನ್ನು ತಿರಸ್ಕರಿಸಿರುವುದನ್ನು ತೋರಿಸುತ್ತದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಹೇಳಿದ್ದಾರೆ.

ಅಮೆರಿಕನ್ನರು ಯುದ್ಧವನ್ನು ತಿರಸ್ಕರಿಸಿದ್ದಾರೆ ಮತ್ತು ಇರಾನ್ ಅವರ ಈ ಸಂದೇಶವನ್ನು ಬೆಂಬಲಿಸುತ್ತದೆ. ಬ್ಲ್ಯಾಕ್‍ಮೇಲರ್‌ಗಳ ಸೇವೆ ಮಾಡಲು ಅಮೆರಿಕ ಸರಕಾರವು ಸಾರ್ವಜನಿಕರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಲು ಪ್ರಯತ್ನಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಘಾಲಿಬಾಫ್ ಎಚ್ಚರಿಸಿದ್ದಾರೆ.

ವಿವೇಚನೆಯೋ ಅಥವಾ ಜೀವನ ವೆಚ್ಚದ ಸಮಸ್ಯೆಯೋ, ಒಟ್ಟಿನಲ್ಲಿ ಅಮೆರಿಕನ್ನರು ಯುದ್ಧ `ಬೇಡ' ಎಂದು ಹೇಳಿದ್ದಾರೆ. ನಾವು ಈ ಸಂದೇಶವನ್ನು ಅನುಮೋದಿಸುತ್ತೇವೆ ಎಂದು ಘಾಲಿಬಾಫ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು ಸಾರ್ವಜನಿಕರ ಅಭಿಪ್ರಾಯವನ್ನು ನಿರ್ಲಕ್ಷಿಸದಂತೆ ಮತ್ತು ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪುನರಾರಂಭಿಸದಂತೆ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor