ಶಾಂತಿ ಒಪ್ಪಂದ ಕೊನೆಗೊಂಡಿದೆ, ಇರಾನ್ ಶರಣಾಗಬೇಕಿದೆ : ಡೊನಾಲ್ಡ್ ಟ್ರಂಪ್
Update: 2026-08-18 22:00 IST
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್,ಆ.18: ಪಶ್ಚಿಮ ಏಶ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಇರಾನ್ ಜೊತೆ ಏರ್ಪಡಿಸಲಾದ ಮಧ್ಯಂತರ ತಿಳುವಳಿಕಾ ಒಪ್ಪಂದವು ಕೊನೆಗೊಂಡಿದ್ದು, ಇರಾನ್ ಇನ್ನು ಶರಣಾಗಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಆದಾಗ್ಯೂ ತನ್ನ ತಂಡವು ಇಸ್ಲಾಮಿಕ್ ರೆವೆಲ್ಯೂಶನರಿ ಗಾರ್ಡ್ಸ್ (ಐಆರ್‌ಜಿಸಿ)ನ ಅಧಿಕಾರಿಗಳ ಜೊತೆ ರಹಸ್ಯವಾಗಿ ಮಾತುಕತೆಯಲ್ಲಿ ತೊಡಗಿದೆಯೆಂದು ಅವರು ಹೇಳಿದ್ದಾರೆ. ಆದರೆ ಟ್ರಂಪ್ ಅವರ ಹೇಳಿಕೆಯನ್ನು ಐಆರ್‌ಜಿಸಿ ನಿರಾಕರಿಸಿದೆ. ತಿಳುವಳಿಕಾ ಒಪ್ಪಂದವು ಮುಕ್ತಾಯಗೊಂಡ ಬಳಿಕ ತಾನು ಇನ್ನೂ ಹೆಚ್ಚಿನ ಆಕ್ರಮಣಕಾರಿ ನಿಲುವನ್ನು ಕೈಗೊಳ್ಳುವ ಸಾಧ್ಯತೆಯಿದೆಯೆಂದು ಇರಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ.