'ಹೊಸ ನಾಯಕತ್ವ ಹುಡುಕುವ ಸಮಯ”: ಇರಾನ್‌ನಲ್ಲಿ ಆಯತುಲ್ಲಾ ಅಲಿ ಖಾಮಿನೈ ಆಡಳಿತ ಕೊನೆಗೊಳಿಸುವಂತೆ ಟ್ರಂಪ್ ಕರೆ
Update: 2026-01-18 10:32 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಆಡಳಿತ ಕೊನೆಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆಯನ್ನು ನೀಡಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ.
ಇರಾನ್‌ನಲ್ಲಿ ಪ್ರಾಬಲ್ಯ ಮರುಸ್ಥಾಪಿಸಲು ಅಮೆರಿಕಾ ಪ್ರಯತ್ನಿಸುತ್ತಿದೆ. ದೇಶದಲ್ಲಿ ಪ್ರತಿಭಟನೆಯ ಸಂದರ್ಭದ ಸಾವು-ನೋವುಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಣ ಎಂದು ಇರಾನಿನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಶನಿವಾರ ಆರೋಪಿಸಿದ್ದಾರೆ. ಇದರ ಬೆನ್ನಲ್ಲೆ ಟ್ರಂಪ್ ಹೇಳಿಕೆ ಹೊರಬಿದ್ದಿದೆ.
ಇರಾನ್‌ನಲ್ಲಿ ಹೊಸ ನಾಯಕತ್ವವನ್ನು ಹುಡುಕುವ ಸಮಯ ಇದು ಎಂದು ಖಾಮೆನೈ ಅವರ ಎಕ್ಸ್ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡುತ್ತಾ ಟ್ರಂಪ್ ಹೇಳಿದ್ದಾರೆ. ಪ್ರತಿಭಟನಾಕಾರರಿಗೆ ಬೆಂಬಲವಾಗಿ ಮಿಲಿಟರಿ ಹಸ್ತಕ್ಷೇಪದ ಬಗ್ಗೆಯೂ ಈ ಮೊದಲು ಟ್ರಂಪ್ ಬೆದರಿಕೆ ಹಾಕಿದ್ದರು.