×
Ad

ಇರಾನ್ ವಿರುದ್ಧದ ಯುದ್ಧದಲ್ಲಿ ಬ್ರಿಟನ್‌ನ ನೆರವಿನ ಅಗತ್ಯವಿಲ್ಲ: ಡೊನಾಲ್ಡ್ ಟ್ರಂಪ್

Update: 2026-03-08 21:18 IST

ಡೊನಾಲ್ಡ್ ಟ್ರಂಪ್ | Photo Credit : PTI 

ವಾಶಿಂಗ್ಟನ್,ಮಾ.8: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ನಡೆಸಿದ ಆರಂಭದಲ್ಲಿ ವಿರೋಧಿಸಿದ್ದ ಬ್ರಿಟನ್ ಅಧ್ಯಕ್ಷ ಕೀರ್ ಸ್ಟಾರ್ಮರ್, ಇದೀಗ ಅಮೆರಿಕಕ್ಕೆ ನೆರವಾಗಲು ಎರಡು ಯುದ್ಧ ವಿಮಾನ ವಾಹಕ ನೌಕೆಗಳನ್ನು ಕಳುಹಿಸಲು ಮುಂದಾಗಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಟೀಕಿಸಿದ್ದಾರೆ. ಯುದ್ಧ ಗೆದ್ದ ಬಳಿಕ ಜೊತೆಗೂಡಲು ಬರುವಂತಹ ಜನರು ಅಮೆರಿಕ ಸೇನೆಗೆ ಬೇಕಾಗಿಲ್ಲವೆಂದು ಮತ್ತು ಅವರ ನೆರವಿನ ಅಗತ್ಯವಿಲ್ಲವೆಂದು ಕಟುವಾಗಿ ಹೇಳಿದ್ದಾರೆ.

ಇರಾನ್ ಜೊತೆಗಿನ ಸಂಘರ್ಷದಲ್ಲಿ ಬ್ರಿಟನ್‌ನ ಬೆಂಬಲದ ಕೊರತೆಯನ್ನು ನಾನು ಯಾವತ್ತೂ ನೆನಪಿಟ್ಟುಕೊಳ್ಳುವುದಾಗಿ ಟ್ರಂಪ್ ಹೇಳಿದ್ದಾರೆ.

ಇರಾನ್ ಮೇಲೆ ದಾಳಿ ನಡೆಸಲು ಬ್ರಿಟಿಷ್‌ ಸೇನಾ ನೆಲೆಗಳನ್ನು ಬಳಸಿಕೊಳ್ಳುವುದಕ್ಕೆ ಆರಂಭದಲ್ಲಿ ಕೀರ್‌ಸ್ಟಾರ್ಮರ್ ತಡೆಯೊಡ್ಡಿದ್ದಕ್ಕಾಗಿ ಟ್ರಂಪ್ ಅವರು ಬ್ರಿಟನ್ ಸರಕಾರವನ್ನು ತೀವ್ರವಾಗಿ ಟೀಕಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News