×
Ad

ಎಲಾನ್ ಮಸ್ಕ್ ಮಕ್ಕಳಿಗೆ ಭಾರತದ ಶ್ರೇಷ್ಠ ಕೃತಿಗಳನ್ನು ಉಡುಗೊರೆ ನೀಡಿದ ಪ್ರಧಾನಿ ಮೋದಿ

Update: 2025-02-14 12:57 IST

Photo credit:X/@narendramodi

ವಾಶಿಂಗ್ಟನ್: ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ತಮ್ಮ ಗೆಳತಿ ಶಿವೋನ್ ಝಿಲ್ಲಿಸ್ ಹಾಗೂ ಮೂವರು ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರುವಾರ ವಾಶಿಂಗ್ಟನ್ ನಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರ ನಾಥ್ ಟಾಗೋರ್ ರಚಿಸಿರುವ ‘ದಿ ಕ್ರೆಸೆಂಟ್ ಮೂನ್’, ಖ್ಯಾತ ಲೇಖಕ ಆರ್.ಕೆ.ನಾರಾಯಣ್ ಅವರ ಬರಹಗಳ ಸಂಗ್ರಹ ಹಾಗೂ ಪಂಡಿತ್ ವಿಷ್ಣು ಶರ್ಮರ ಪಂಚತಂತ್ರ ಕೃತಿಗಳನ್ನು ಎಲಾನ್ ಮಸ್ಕ್ ಅವರ ಮಕ್ಕಳಿಗೆ ಉಡುಗೊರೆ ನೀಡಿದರು.

ಈ ಭೇಟಿಯ ಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅವುಗಳಲ್ಲಿ ಎಲಾನ್ ಮಸ್ಕ್ ರ ಮಕ್ಕಳು ತಮಗೆ ನೀಡಿದ ಕೃತಿಗಳನ್ನು ಓದುತ್ತಿರುವುದು ಸೆರೆಯಾಗಿದೆ.

“ಎಲಾನ್ ಮಸ್ಕ್ ಹಾಗೂ ಅವರ ಕುಟುಂಬವನ್ನು ಭೇಟಿಯಾಗಿದ್ದಕ್ಕೆ ಹಾಗೂ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಕ್ಕೆ ಸಂತೋಷವಾಯಿತು” ಎಂದು ಮೋದಿ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News