ಅಮೆರಿಕವು ಗಾಝಾವನ್ನು `ಪಡೆದು' ಸ್ವಾತಂತ್ರ್ಯ ವಲಯವಾಗಿ ಮಾಡಬೇಕು: ಟ್ರಂಪ್
Update: 2025-05-15 21:49 IST
ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಅಮೆರಿಕವು ಗಾಝಾ ವಲಯವನ್ನು `ಪಡೆದುಕೊಂಡು' ಅದನ್ನು ಸ್ವಾತಂತ್ರ್ಯ ವಲಯ'ವಾಗಿ ಪರಿವರ್ತಿಸಬೇಕು ಎಂದು ತಾನು ನಂಬುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.
ಗಾಝಾ ಕುರಿತು ನಾನು ಪರಿಕಲ್ಪನೆಗಳನ್ನು ಹೊಂದಿದ್ದು ಅದು ಅತ್ಯುತ್ತಮ ಎಂದು ಭಾವಿಸುತ್ತೇನೆ. ಅಮೆರಿಕ ಇದರಲ್ಲಿ ತೊಡಗಿಸಿಕೊಳ್ಳಲಿ ಮತ್ತು ಅದನ್ನು ಸ್ವಾತಂತ್ರ್ಯ ವಲಯವನ್ನಾಗಿಸಲಿ. ಅಮೆರಿಕ ಇದರಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ' ಎಂದು ಟ್ರಂಪ್ ಹೇಳಿದ್ದಾರೆ.