ಇಸ್ರೇಲ್–ಹಿಜ್ಬುಲ್ಲಾ ದಾಳಿ ನಿಲ್ಲಿಸಲು ಒಪ್ಪಿಗೆ: ಟ್ರಂಪ್ ಘೋಷಣೆ
ಬೈರುತ್ ಗೆ ತೆರಳುತ್ತಿದ್ದ ಪಡೆಗಳನ್ನು ಹಿಂತಿರುಗಿಸಲಾಗಿದೆ ಎಂದ ಅಮೆರಿಕ ಅಧ್ಯಕ್ಷ
Update: 2026-06-01 23:27 IST
ಡೊನಾಲ್ಡ್ ಟ್ರಂಪ್ | Photo Credit ; PTI
ವಾಷಿಂಗ್ಟನ್, ಜೂ. 1: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅತ್ಯಂತ ಫಲಪ್ರದವಾದ ಮಾತುಕತೆ ನಡೆಸಿದ್ದೇನೆ. ಬೈರುತ್ಗೆ ಯಾವುದೇ ಪಡೆಗಳು ಹೋಗುವುದಿಲ್ಲ ಹಾಗೂ ಆ ದಿಕ್ಕಿನಲ್ಲಿ ಸಾಗುತ್ತಿದ್ದ ಪಡೆಗಳನ್ನು ಈಗಾಗಲೇ ಹಿಂತಿರುಗಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಹೇಳಿದ್ದಾರೆ.
ಈ ಕುರಿತು ಟುತ್ ಸೋಷಿಯಲ್ ನಲ್ಲಿ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉನ್ನತ ಮಟ್ಟದ ಪ್ರತಿನಿಧಿಗಳ ಮೂಲಕ ಹಿಜ್ಬುಲ್ಲಾ ಸಂಘಟನೆಯೊಂದಿಗೂ ಉತ್ತಮ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
‘ಎಲ್ಲಾ ರೀತಿಯ ಗುಂಡಿನ ದಾಳಿ ನಿಲ್ಲಿಸಲು ಹಿಜ್ಬುಲ್ಲಾ ಒಪ್ಪಿಗೆ ಸೂಚಿಸಿದೆ. ಇಸ್ರೇಲ್ ಹಿಜ್ಬುಲ್ಲಾ ಮೇಲೆ ದಾಳಿ ನಡೆಸುವುದಿಲ್ಲ ಮತ್ತು ಹಿಜ್ಬುಲ್ಲಾ ಕೂಡ ಇಸ್ರೇಲ್ ಮೇಲೆ ದಾಳಿ ನಡೆಸುವುದಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.