ಇರಾನ್ ನ ರೇಡಾರ್, ಟೆಲಿಕಾಂ ಸೌಲಭ್ಯಗಳ ಮೇಲೆ ದಾಳಿ: ಅಮೆರಿಕ
ಕುವೈತ್ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ವರದಿ
Photo Credit : AP
ವಾಷಿಂಗ್ಟನ್, ಜೂ. 1: ಇರಾನ್ ನ ರೇಡಾರ್ ಸ್ಥಾಪನೆ ಗಳು ಮತ್ತು ಡ್ರೋನ್ ಕಮಾಂಡ್ ಹಾಗೂ ನಿಯಂತ್ರಣ ಸೌಲಭ್ಯಗಳ ಮೇಲೆ ರವಿವಾರ ದಾಳಿ ನಡೆಸಿರುವುದಾಗಿ ಅಮೆರಿಕದ ಮಿಲಿಟರಿ ಹೇಳಿದೆ.
ಕಾರ್ಯಾಚರಣೆಯು ಇರಾನ್ ನ ಗೊರುಕ್ ಮತ್ತು ಖೆಶ್ಮ್ ದ್ವೀಪಗಳಲ್ಲಿನ ಸ್ಥಳಗಳನ್ನು ಗುರಿಯಾಗಿಸಿಕೊಂಡಿತ್ತು. ಅಮೆರಿಕದ MQ–1 ಡ್ರೋನ್ ಅನ್ನು ಹೊಡೆದುರುಳಿಸಿದ ನಂತರ ಆತ್ಮರಕ್ಷಣೆಗಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಈ ಮಧ್ಯೆ, ಇರಾನ್ ನ ಪ್ರದೇಶಗಳ ಮೇಲೆ ದಾಳಿ ನಡೆಸಲು ಅಮೆರಿಕ ಬಳಸುತ್ತಿದ್ದ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇರಾನ್ ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRCG) ಸೋಮವಾರ ಹೇಳಿದೆ.
ಇದಕ್ಕೂ ಮುನ್ನ, ದೇಶದೊಳಗೆ ಪ್ರವೇಶಿಸುತ್ತಿದ್ದ ಡ್ರೋನ್ ಗಳು ಮತ್ತು ಕ್ಷಿಪಣಿಗಳಿಗೆ ಪ್ರತಿಯಾಗಿ ತನ್ನ ವಾಯುರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಕುವೈತ್ ಮಿಲಿಟರಿ ತಿಳಿಸಿತ್ತು. ಇರಾನ್ ನ ಹೇಯ ಮತ್ತು ಪುನರಾವರ್ತಿತ ದಾಳಿಗಳನ್ನು ಖಂಡಿಸುವುದಾಗಿ ಕುವೈತ್ ನ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.