×
Ad

ಟ್ರಂಪ್ ಅವರ ತದ್ರೂಪಿ ಜೆ.ಡಿ. ವ್ಯಾನ್ಸ್ : ಬೈಡನ್ ಟೀಕೆ

Update: 2024-07-16 20:37 IST

ಜೋ ಬೈಡನ್ , ಟ್ರಂಪ್ | PTI 

ವಾಷಿಂಗ್ಟನ್ : ತಮ್ಮ ಉಪಾಧ್ಯಕ್ಷರಾಗಿ ಟ್ರಂಪ್ ಆಯ್ಕೆ ಮಾಡಿರುವ ರಿಪಬ್ಲಿಕನ್ ಸೆನೆಟರ್ ಜೆ.ಡಿ. ವ್ಯಾನ್ಸ್ ಅವರು ಟ್ರಂಪ್ ಅವರ ತದ್ರೂಪಿ ಮತ್ತು ಕಟ್ಟಾ ಬಲಪಂಥೀಯ ತೀವ್ರವಾದಿ ಎಂದು ಅಧ್ಯಕ್ಷ ಜೋ ಬೈಡನ್ ಅವರ ತಂಡ ಟೀಕಿಸಿದೆ.

`ವ್ಯಾನ್ಸ್ 2020ರಲ್ಲಿ ಚುನಾವಣೆಯನ್ನು ನಿರಾಕರಿಸಿದ್ದರು. ರಾಷ್ಟ್ರೀಯ ಗರ್ಭಪಾತ ನಿಷೇಧವನ್ನು ಬೆಂಬಲಿಸಿದ್ದರು ಮತ್ತು ಐವಿಎಫ್ ಸೌಲಭ್ಯದ ವಿರುದ್ಧ ಮತ ಹಾಕಿದ್ದರು. ಕಾರ್ಮಿಕರ ಪರ ತಾನು ಎಂದು ಬೊಗಳೆ ಬಿಡುವ ವ್ಯಾನ್ಸ್ ಶ್ರೀಮಂತರಿಗೆ ತೆರಿಗೆ ರಿಯಾಯಿತಿ ನೀಡಿ ಬಡವರಿಗೆ ತೆರಿಗೆ ಹೆಚ್ಚಿಸಲು ಬಯಸಿದ್ದಾರೆ ಎಂದು ಬೈಡನ್ ಅವರ ತಂಡ ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News