ಡೊನಾಲ್ಡ್ ಟ್ರಂಪ್ | Photo Credit : NDTV 

ನ್ಯೂಯಾರ್ಕ್, ಅ.24: ಭಾರತ ಮತ್ತು ಪಾಕಿಸ್ತಾನದ ನಡುವಿನ ಪೂರ್ಣ ಪ್ರಮಾಣದ ಯುದ್ಧವನ್ನು ತಡೆದ ಶ್ರೇಯಸ್ಸು ತಮಗೆ ಸಲ್ಲುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

250% ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದರಿಂದಲೇ ಅಣ್ವಸ್ತ್ರ ಸಜ್ಜಿತ ನೆರೆಹೊರೆಯ ದೇಶಗಳು ಯುದ್ಧವನ್ನು ನಿಲ್ಲಿಸುವಂತಾಯಿತು ಎಂದು ಅವರು ಹೇಳಿದ್ದಾರೆ.

ಶುಕ್ರವಾರ ಫ್ಲೋರಿಡಾದಲ್ಲಿ ನಡೆದ ಮಧ್ಯಂತರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಸಂಘರ್ಷ ಮುಂದುವರಿಸಿದರೆ ತೀವ್ರ ವ್ಯಾಪಾರ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ತಾವು ಮಧ್ಯಪ್ರವೇಶಿಸುವ ಮೊದಲು ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಅಂಚಿನಲ್ಲಿದ್ದವು ಎಂದು ಹೇಳಿದ್ದಾರೆ. ಈ ಕುರಿತು ಪಿಟಿಐ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor