×
Ad

ಚೀನಾದ ಮೇಲಿನ ಸುಂಕವನ್ನು ಶೇ. 125ಕ್ಕೆ ಏರಿಸಿದ ಟ್ರಂಪ್ ; ಇತರ ದೇಶಗಳಿಗೆ 90 ದಿನಗಳ ವಿನಾಯಿತಿ

Update: 2025-04-09 23:22 IST

ವಾಶಿಂಗ್ಟನ್ : ಚೀನಾದ ಮೇಲಿನ ಸರಕುಗಳ ಆಮದುಗಳ ಸುಂಕವನ್ನು ತಕ್ಷಣದಿಂದಲೇ ಶೇ. 125ಕ್ಕೆ ಏರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಟ್ರೂತ್‌ ಸಾಮಾಜಿಕ ಜಾಲದಲ್ಲಿನ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

ಇತರ ದೇಶಗಳಿಗೆ ಅಮೆರಿಕುವ ವಿಧಿಸಿರುವ ಸುಂಕಗಳಿಗೆ 90 ದಿನಗಳ ವಿನಾಯಿತಿ ನೀಡಿದ್ದು, ಆ ಬಳಿಕ ಸುಂಕ ಹೆಚ್ಚಳ ಮಾಡಲಾಗುವುದು ಎಂದು ಡೊನಾಲ್ಡ್‌ ಟ್ರಂಪ್ ಅಧಿಕೃತ ಹೇಳಿಕೆ ನೀಡಿದ್ದಾರೆ. ಈಗಾಗಲೇ ಸುಂಕ ವಿನಾಯಿತಿಗಾಗಿ ಶ್ವೇತಭವನದ ಕದ ತಟ್ಟಿರುವ 75 ದೇಶಗಳಳಿಗೆ ಇದರಿಂದ ಅನುಕೂಲವಾಗಲಿದೆ ಎನ್ನಲಾಗಿದೆ.

ಟ್ರಂಪ್ ಅವರು ಸುಂಕದ ಕುರಿತು ಘೋಷಣೆ ಮಾಡುತ್ತಿದ್ದಂತೆ ಅಮೆರಿಕ ಶೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಕಚ್ಛಾ ತೈಲ ಮಾರುಕಟ್ಟೆಯಲ್ಲಿಯೂ ಒಮ್ಮೆಲೇ ತಲ್ಲಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News