×
Ad

ಪ್ರತಿಭಟನಾಕಾರರನ್ನು ಗಲ್ಲಿಗೇರಿಸಿದರೆ ಇರಾನ್ ಮೇಲೆ ‘ಕಠಿಣ ಕ್ರಮ’: ಟ್ರಂಪ್ ಎಚ್ಚರಿಕೆ

Update: 2026-01-14 07:46 IST

ಡೊನಾಲ್ಡ್ ಟ್ರಂಪ್ (File Photo: PTI)

ವಾಷಿಂಗ್ಟನ್: ಇರಾನಿನಲ್ಲಿ ದೇಶಾದ್ಯಂತ ಪ್ರತಿಭಟನೆ ಮುಂದುವರಿದಿರುವ ನಡುವೆಯೇ, ಅಲ್ಲಿನ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಗಲ್ಲುಶಿಕ್ಷೆ ಜಾರಿಗೊಳಿಸಲು ಮುಂದಾದರೆ ಅಮೆರಿಕ ಬಲಪ್ರಯೋಗದ ಮೂಲಕ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

“ಅಂತಹ ಕ್ರಮಕ್ಕೆ ಅಧಿಕಾರಿಗಳು ಮುಂದಾದರೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಬುಧವಾರದಿಂದ ಗಲ್ಲುಶಿಕ್ಷೆ ಜಾರಿಗೊಳಿಸಲಾಗುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯ ಕೇಳಿದಾಗ, ಈ ಪ್ರತಿಕ್ರಿಯೆ ನೀಡಿದರು.

ಅಂತಿಮ ಗುರಿ ಏನು ಎಂದು ಕೇಳಿದ ಪ್ರಶ್ನೆಗೆ, “ಕೊನೆಯ ಆಟವನ್ನು ಗೆಲ್ಲುವುದೇ ಗುರಿ. ನನಗೆ ಗೆಲುವು ಇಷ್ಟ” ಎಂದು ಟ್ರಂಪ್ ಉತ್ತರಿಸಿದರು.

ಟ್ರಂಪ್ ಮಿಚಿಗನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಸಂದರ್ಶನ ನಡೆಯಿತು. ಮಿಚಿಗನ್‌ನಲ್ಲಿ ಯಾವುದೇ ಉತ್ಪಾದನಾ ಘಟಕಕ್ಕೆ ಭೇಟಿ ನೀಡದ ಅವರು, ಆರ್ಥಿಕತೆಯ ಕುರಿತು ಭಾಷಣ ಮಾಡಿದರು. ಇರಾನಿನ ಪ್ರತಿಭಟನಾಕಾರರಿಗೆ ಶೀಘ್ರ ನೆರವು ನೀಡಲಾಗುತ್ತದೆ ಎಂಬ ತಮ್ಮ ನಿರ್ಧಾರವನ್ನು ಅವರು ಪುನರುಚ್ಚರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News