×
Ad

ಭಾರತ-ಪಾಕ್ ಕದನ ವಿರಾಮಕ್ಕೆ ಬ್ರಿಟನ್, ಸೌದಿ ಸ್ವಾಗತ

Update: 2025-05-11 23:17 IST

ಸಾಂದರ್ಭಿಕ ಚಿತ್ರ | PC : NDTV

ಲಂಡನ್: ಭಾರತ ಮತ್ತು ಪಾಕಿಸ್ತಾನ ಶನಿವಾರ ಕದನ ವಿರಾಮಕ್ಕೆ ಒಪ್ಪಿರುವುದು ಉದ್ವಿಗ್ನತೆಯನ್ನು ಶಮನಗೊಳಿಸುವತ್ತ ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ ಎಂದು ಬ್ರಿಟನ್ ಮತ್ತು ಸೌದಿ ಅರೆಬಿಯಾ ರವಿವಾರ ಅಭಿಪ್ರಾಯಪಟ್ಟಿದೆ.

ಉದ್ವಿಗ್ನತೆ ಶಮನಗೊಳ್ಳುವುದು ಎಲ್ಲರ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಹೇಳಿದ್ದಾರೆ. ಕದನ ವಿರಾಮವನ್ನು ಗೌರವಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನೂ ನಡೆಸಬೇಕು ಎಂದು ಯುರೋಪಿಯನ್ ಯೂನಿಯನ್(ಇಯು) ಆಗ್ರಹಿಸಿದೆ. ಕದನ ವಿರಾಮ ಒಪ್ಪಂದವನ್ನು ಜರ್ಮನಿ, ಟರ್ಕಿ, ಅಜೆರ್ಬೈಜಾನ್ ದೇಶಗಳು ಕೂಡ ಸ್ವಾಗತಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News