×
Ad

ಉಕ್ರೇನ್ ಸರಣಿ ಡ್ರೋನ್ ದಾಳಿ: ಮಾಸ್ಕೋ ವಿಮಾನ ನಿಲ್ದಾಣ ಬಂದ್

Update: 2025-05-06 22:51 IST

PC : NDTV

ಮಾಸ್ಕೋ: ರಶ್ಯ ರಾಜಧಾನಿ ಮಾಸ್ಕೋ ನಗರವನ್ನು ಗುರಿಯಾಗಿಸಿ ಸತತ ಎರಡನೇ ದಿನವೂ ಉಕ್ರೇನ್ ಸರಣಿ ಡ್ರೋನ್ ದಾಳಿ ನಡೆಸಿದ ಬಳಿಕ ಮಾಸ್ಕೋ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಮಾಸ್ಕೋದತ್ತ ವಿವಿಧ ದಿಕ್ಕಿನಿಂದ ಧಾವಿಸಿ ಬರುತ್ತಿದ್ದ ಕನಿಷ್ಠ 10 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಡ್ರೋನ್‍ಗಳ ಅವಶೇಷ ಬಿದ್ದ ಕೆಲವು ಸ್ಥಳಗಳಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ತುರ್ತು ಕಾರ್ಯಪಡೆ ಸಿಬ್ಬಂದಿ ನಿಯಂತ್ರಿಸಿದ್ದು ಯಾವುದೇ ಸಾವು-ನೋವು ಅಥವಾ ನಾಶ, ನಷ್ಟ ವರದಿಯಾಗಿಲ್ಲ.

ಮಾಸ್ಕೋವನ್ನು ಹೆದ್ದಾರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯ ಮೇಲೆ ಡ್ರೋನ್ ಅವಶೇಷ ಬಿದ್ದ ಕಾರಣ ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ತೊಡಕಾಗಿತ್ತು. ಮಾಸ್ಕೋ ಹೊರವಲಯದ ಹಲವು ನಗರಗಳಲ್ಲಿನ ವಿಮಾನ ನಿಲ್ದಾಣಗಳನ್ನೂ ಬಂದ್ ಮಾಡಲಾಗಿದೆ ಎಂದು ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News