×
Ad

ಉಕ್ರೇನ್: ರಶ್ಯದ ಡ್ರೋನ್ ದಾಳಿಯಲ್ಲಿ ಬಾಲಕಿ ಸಾವು; ಮೂವರಿಗೆ ಗಾಯ

Update: 2025-04-29 23:08 IST

ಸಾಂದರ್ಭಿಕ ಚಿತ್ರ - AI

ಕೀವ್: ಉಕ್ರೇನ್ ಮೇಲೆ ರಶ್ಯದ ಸರಣಿ ಡ್ರೋನ್ ದಾಳಿಯಲ್ಲಿ 12 ವರ್ಷದ ಬಾಲಕಿ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಏಕಪಕ್ಷೀಯ 72 ಗಂಟೆಗಳ ಕದನ ವಿರಾಮ ಘೋಷಣೆ `ಅಮೆರಿಕವನ್ನು ಮೋಸಗೊಳಿಸುವ ಪ್ರಯತ್ನ' ಎಂದು ಉಕ್ರೇನ್ ಟೀಕಿಸಿದೆ.

ಉಕ್ರೇನ್‍ನ ಆಗ್ನೇಯ ಪ್ರಾಂತ ನಿಪ್ರೊಪೆಟ್ರೋವ್ಸ್ಕ್ ಪ್ರಾಂತದಲ್ಲಿ ರಶ್ಯದ ಡ್ರೋನ್ ದಾಳಿಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು 12 ವರ್ಷದ ಬಾಲಕಿ ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ಖಾರ್ಕಿವ್ ನಗರದ ಮೇಲೆ 20 ಡ್ರೋನ್‍ಗಳು ಹಾಗೂ 31 ಪ್ರಬಲ ಮಾರ್ಗದರ್ಶಿ ಬಾಂಬ್‍ಗಳನ್ನು ರಶ್ಯ ಪ್ರಯೋಗಿಸಿದೆ. ರಶ್ಯದ ಹಲವು ಡ್ರೋನ್‍ಗಳನ್ನು ಉಕ್ರೇನ್‍ನ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದ್ದು ಡ್ರೋನ್‍ನ ಅವಶೇಷ ಬಿದ್ದು ಕೀವ್‍ನ ಹೊರವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News