ಡ್ಯಾನ್ ಡ್ರಿಸ್ಕೊಲ್ | Photo Credit : AP 

ವಾಷಿಂಗ್ಟನ್, ಸೆ. 1: ಅಮೆರಿಕದ ಭೂಸೇನಾ ಕಾರ್ಯದರ್ಶಿ ಡ್ಯಾನ್ ಡ್ರಿಸ್ಕೊಲ್ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಶ್ವೇತಭವನ ಸೋಮವಾರ ತಿಳಿಸಿದೆ. ಡ್ಯಾನ್ ಅವರು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರೊಂದಿಗೆ ಹಲವು ತಿಂಗಳಿಂದ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದರು ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಡ್ಯಾನ್ ಅವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ ಅವರು, ‘‘ಅಮೆರಿಕವನ್ನು ಮರಳಿ ಮಹಾನ್ ರಾಷ್ಟ್ರವಾಗಿಸುವ ಅಧ್ಯಕ್ಷ ಟ್ರಂಪ್ ಅವರ ಕಾರ್ಯಸೂಚಿಯನ್ನು ಸೇನಾ ಇಲಾಖೆಯಲ್ಲಿ ಮುನ್ನಡೆಸುವಲ್ಲಿ ಡ್ರಿಸ್ಕೊಲ್ ಅವರು ಪರಿಣಾಮಕಾರಿ ಪಾತ್ರ ವಹಿಸಿದ್ದರು’’ ಎಂದು ಹೇಳಿದ್ದಾರೆ.

‘‘ಅಮೆರಿಕದ ಸೇನಾ ಕಾರ್ಯಾಚರಣೆಗಳಲ್ಲಿ ಡ್ಯಾನ್ ಅವರ ನಾಯಕತ್ವ ಅಸಾಧಾರಣವಾಗಿತ್ತು’’ ಎಂದು ಆಕೆ ಹೇಳಿದ್ದಾರೆ. ರಶ್ಯ ಹಾಗೂ ಉಕ್ರೇನ್ ಮತ್ತಿತರ ವಿವಾದಗಳಲ್ಲಿ ಮಾತುಕತೆಗೆ ಸಹಕರಿಸಿದ್ದರು. ಅಮೆರಿಕ ಸೇನೆಯ ಮುಖ್ಯ ಕಮಾಂಡರ್ ಹಾಗೂ ಸಮರ ಕಾರ್ಯದರ್ಶಿಯವರ ಜೊತೆಗೂಡಿ, ಡ್ರಿಸ್ಕೊಲ್ ಅವರು ಶ್ರಮಿಸಿದ ಕಾರಣ, ಅಮೆರಿಕ ಸೇನೆಯು ಈಗ ಹಿಂದೆಂದಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ’’ ಎಂದರು.

ಇರಾನ್ ಯುದ್ಧವು ಏಳನೇ ತಿಂಗಳಿಗೆ ಕಾಲಿಟ್ಟ ಸಂದರ್ಭದಲ್ಲೇ ಡ್ಯಾನ್ ಅವರ ರಾಜೀನಾಮೆಯಿಂದಾಗಿ ಭೂಸೇನಾ ಕಾರ್ಯದರ್ಶಿ ಹುದ್ದೆ ತೆರವಾಗಿರುವುದು ಗಮನಾರ್ಹವಾಗಿದೆ. ಕಳೆದ ಎಪ್ರಿಲ್ ನಲ್ಲಿ ಹೆಗ್ಸೆತ್ ಅವರು ಸೇನಾ ವರಿಷ್ಠ ರ್ಯಾಂಡಿ ಜಾರ್ಜ್ ಅವರನ್ನು ವಜಾಗೊಳಿಸಿದ್ದರು ಹಾಗೂ ಅವರ ಸ್ಥಾನದಲ್ಲಿ ಇನ್ನೂ ಯಾವುದೇ ಖಾಯಂ ಉತ್ತರಾಧಿಕಾರಿಯನ್ನು ನೇಮಕಗೊಳಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor