×
Ad

ಪಶ್ಚಿಮದಂಡೆ ಭೇಟಿಯ ವೇಳೆ ಇಸ್ರೇಲಿ ವಸಾಹತುಗಾರರಿಂದ ಬಂಧನಕ್ಕೆ ಒಳಗಾದ ಅಮೆರಿಕ ಸಂಸದ ರೋ ಖನ್ನಾ

Update: 2026-07-11 21:48 IST

ರೋ ಖನ್ನಾ | Photo Credit : NDTV 

ನ್ಯೂಯಾರ್ಕ್, ಜು.11: ಪಶ್ಚಿಮ ದಂಡೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಶಸ್ತ್ರ ಇಸ್ರೇಲಿ ವಸಾಹತುಗಾರರು ತಮ್ಮನ್ನು ತಡೆದು ನಿಲ್ಲಿಸಿ ಬಂಧಿಸಿದ್ದರು ಎಂದು ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಸಂಸದ ರೋ ಖನ್ನಾ ತಿಳಿಸಿದ್ದಾರೆ.

ಈ ಘಟನೆಯನ್ನು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ಎಂದು ಬಣ್ಣಿಸಿರುವ ಅವರು, ಇಸ್ರೇಲಿ ಭದ್ರತಾ ಪಡೆಗಳು ವಸಾಹತುಗಾರರ ಪರವಾಗಿಯೇ ನಿಂತಿದ್ದವು ಎಂದು ಆರೋಪಿಸಿದ್ದಾರೆ.

"ಇಸ್ರೇಲಿ ವಸಾಹತುಗಾರರು ಅಲ್ಲಿನ ಶಾಲೆ ಮತ್ತು ಇಡೀ ಗ್ರಾಮವನ್ನೇ ನಾಶಪಡಿಸಿದ್ದರು. ನಾವು ಅದನ್ನು ನೋಡಲು ಅಲ್ಲಿಗೆ ಹೋಗಿದ್ದೆವು. ಆಗ ಈ ಗೂಂಡಾಗಳು ಮೆಷಿನ್ ಗನ್‌ಗಳು, ಅಮೆರಿಕ ನಿರ್ಮಿತ ಎಂ4 ರೈಫಲ್‌ಗಳೊಂದಿಗೆ ಬಂದು ನಮ್ಮನ್ನು ತಡೆದು ನಿಲ್ಲಿಸಿದರು. ಅವರು ರಸ್ತೆಯನ್ನು ಬಂದ್ ಮಾಡಿ, ನಂತರ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್)ಗೆ ಕರೆ ಮಾಡಿದರು. ಐಡಿಎಫ್ ಅಮೆರಿಕನ್ನರ ಪರವಾಗಿ ಇರಲಿಲ್ಲ, ಬದಲಿಗೆ ಆ ವಸಾಹತುಗಾರರ ಪರವಾಗಿ ನಿಂತಿತ್ತು" ಎಂದು ಖನ್ನಾ ಗಂಭೀರ ಆರೋಪ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News