Photo Credit : AP 

ವಾಶಿಂಗ್ಟನ್: ಅಮೆರಿಕದಲ್ಲಿ ಮಂಗಳವಾರ ಮಧ್ಯಂತರ ಚುನಾವಣೆಯ ಮತದಾನ ನಡೆದಿದ್ದು ಡೊನಾಲ್ಡ್ ಟ್ರಂಪ್ ಅವರ ಅಧಿಕಾರದ ಉಳಿದ ಎರಡು ವರ್ಷಗಳಲ್ಲಿ ಸಂಸತ್ತಿನ ಮೇಲೆ ಯಾರ ಹಿಡಿತ ಇರಲಿದೆ ಎಂಬುದನ್ನು ನಿರ್ಣಯಿಸಲು ಲಕ್ಷಾಂತರ ಅಮೆರಿಕನ್ನರು ಮತ ಚಲಾಯಿಸಿದ್ದಾರೆ.

ಇತಿಹಾಸದಲ್ಲೇ ಅತ್ಯಂತ ದೊಡ್ಡ ಚುನಾವಣಾ ದಿನದ ಮೇಲ್ವಿಚಾರಣಾ ಪ್ರಯತ್ನವಾಗಿ ಎಲ್ಲಾ 50 ರಾಜ್ಯಗಳಿಗೆ 1,000 ಚುನಾವಣಾ ಮೇಲ್ವಿಚಾರಕರು ಮತ್ತು ವೀಕ್ಷಕರನ್ನು ನಿಯೋಜಿಸಿರುವುದಾಗಿ ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ. ಮೊದಲ ಫಲಿತಾಂಶಗಳು ಬುಧವಾರ (ನವೆಂಬರ್ 4 ರಂದು) ಭಾರತೀಯ ಕಾಲಮಾನ ಬೆಳಿಗ್ಗೆ 4:30 ರಿಂದ ಹೊರಬರಲು ಪ್ರಾರಂಭವಾಗುವ ನಿರೀಕ್ಷೆಯಿದೆ. ಅಂತಿಮ ಮತ ಎಣಿಕೆ ಪೂರ್ಣಗೊಳ್ಳಲು ಕೆಲವು ದಿನಗಳು ಅಥವಾ ವಾರಗಳೇ ಬೇಕಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor