ನೇಪಾಳದಲ್ಲಿ ಎರಡು ಹೆಲಿಕಾಪ್ಟರ್ ಗಳ ನಡುವೆ ಢಿಕ್ಕಿ: ಓರ್ವ ಮೃತ್ಯು
ಕಠ್ಮಂಡು: ನೇಪಾಳದ ಸೋಲುಖುಂಬು ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ವಿದೇಶಿ ಪ್ರಜೆಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲೆಯ ಫೆರಿಚೆ (Pheriche) ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಗೆ ಬರುತ್ತಿದ್ದ ಎರಡು ಹೆಲಿಕಾಪ್ಟರ್ ಗಳು ಪರಸ್ಪರ ಢಿಕ್ಕಿ ಹೊಡೆದಿವೆ. 'ಫಿಶ್ ಟೈಲ್ ಏರ್' (Fishtail Air) ಮತ್ತು 'ಡೈನಸ್ಟಿ ಏರ್' (Dynasty Air) ಸಂಸ್ಥೆಗಳಿಗೆ ಸೇರಿದ ಹೆಲಿಕಾಪ್ಟರ್ ಗಳ ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹೆಲಿಪ್ಯಾಡ್‌ನಲ್ಲಿ ಇಳಿಯಲು ಸಮೀಪಿಸುತ್ತಿದ್ದಾಗ ಎರಡೂ ಹೆಲಿಕಾಪ್ಟರ್‌ಗಳ ರೋಟಾರ್ ಬ್ಲೇಡ್ ಗಳು (ತಿರುಗುವ ರೆಕ್ಕೆಗಳು) ಒಂದಕ್ಕೊಂದು ತಾಗಿದೆ. ಇದರಿಂದ ಅವಘಡ ಸಂಭವಿಸಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.