ಅಮೆರಿಕದ ರಕ್ಷಣಾ ಇಲಾಖೆಯ ಪ್ರತೀಕ ಚಿಹ್ನೆ   (ಸಾಂದರ್ಭಿಕ ಚಿತ್ರ | Photo: Al Arabiya)

ವಾಷಿಂಗ್ಟನ್: ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ, ಪೆಂಟಗನ್ (ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ) ಸಾರ್ವಜನಿಕವಾಗಿ ಬಹಿರಂಗಪಡಿಸಿರುವ ಅಂಕಿಅಂಶಗಳಿಗಿಂತ ಹೆಚ್ಚಿನ ಸಂಖ್ಯೆಯ ಅಮೆರಿಕನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ʼವಾಷಿಂಗ್ಟನ್ ಪೋಸ್ಟ್ʼ ಶುಕ್ರವಾರ ವರದಿ ಮಾಡಿದೆ.

ಆದರೆ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಈ ವರದಿಯನ್ನು ನಿರಾಕರಿಸಿದ್ದಾರೆ.

ಐವರು ಅನಾಮಧೇಯ ಅಧಿಕಾರಿಗಳನ್ನು ಉಲ್ಲೇಖಿಸಿರುವ ವಾಷಿಂಗ್ಟನ್ ಪೋಸ್ಟ್, ಇರಾನ್ ವಿರುದ್ಧದ ಸಂಘರ್ಷದಲ್ಲಿ ಕನಿಷ್ಠ 22 ಅಮೆರಿಕನ್ ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ. ಈ ಸಂಖ್ಯೆ ಪೆಂಟಗನ್ ಸಾರ್ವಜನಿಕವಾಗಿ ಪ್ರಕಟಿಸಿರುವ ಸಾವಿನ ಅಂಕಿಅಂಶಕ್ಕಿಂತ ನಾಲ್ಕು ಹೆಚ್ಚಾಗಿದೆ.

ಮತ್ತೊಬ್ಬ ಅನಾಮಧೇಯ ಅಧಿಕಾರಿಯನ್ನು ಉಲ್ಲೇಖಿಸಿರುವ ಪತ್ರಿಕೆ, ಬಹಿರಂಗಪಡಿಸದ ಎಲ್ಲಾ ಸಾವುಗಳು ಹಲವು ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ನೇರವಾಗಿ ಸಂಬಂಧಿಸಿಲ್ಲ ಎಂದು ವರದಿ ಮಾಡಿದೆ. ಆದರೆ, ಸಂಘರ್ಷ ಮುಂದುವರಿದಿರುವ ಸಂದರ್ಭದಲ್ಲಿ ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲಾಗಿದ್ದ ಅಮೆರಿಕದ ಸಿಬ್ಬಂದಿಯೂ ಇವುಗಳಲ್ಲಿ ಸೇರಿದ್ದಾರೆ ಎಂದು ತಿಳಿಸಿದೆ.

ಈ ವರದಿಯ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ , ಈ ವರದಿಯನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ.

ಆದರೆ, ಸಾವು-ನೋವಿನ ಅಂಕಿಅಂಶಗಳಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಪತ್ರಿಕೆ ಕೇಳಿದ ಪ್ರಶ್ನೆಗಳಿಗೆ ಪೆಂಟಗನ್ ಉತ್ತರಿಸಲು ನಿರಾಕರಿಸಿದೆ ಎಂದು ʼವಾಷಿಂಗ್ಟನ್ ಪೋಸ್ಟ್ʼ ತನ್ನ ವರದಿಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor