×
Ad

VIDEO | ಒಲಿಂಪಿಕ್ ಬೆಳ್ಳಿಪದಕ ವಿಜೇತೆ ಈಗ ರೆಸ್ಟೋರೆಂಟ್‍ನಲ್ಲಿ ಸಹಾಯಕಿ!

Update: 2024-08-20 12:36 IST

ಬೀಜಿಂಗ್; ಇತ್ತೀಚೆಗೆ ಮುಕ್ತಾಯಗೊಂಡಿರುವ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹಲವು ಅಥ್ಲೀಟ್‍ಗಳು ಜಗತ್ತಿಗೆ ತೆರೆದುಕೊಂಡಿದ್ದಾರೆ. ಇಂಥವರಲ್ಲಿ ಬ್ಯಾಲೆನ್ಸ್ ಬೀಜ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆದ್ದ ಚೀನಾದ ಜಿಮ್ನಾಸ್ಟಿಕ್ ಪಟು ಝೊಹು ಯಾಕಿನ್ ಕೂಡಾ ಒಬ್ಬರು. ಅಷ್ಟೇನೂ ಖ್ಯಾತಿ ಪಡೆಯದ 18 ವರ್ಷ ವಯಸ್ಸಿನ ಪೋರಿ ಒಲಿಂಪಿಕ್ ಪೋಡಿಯಂ ಏರುವ ಮೂಲಕ ಸುದ್ದಿಯಾಗಿದ್ದರು. ಇದೀಗ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಕ್ರೀಡಾಕೂಟ ಮುಕ್ತಾಯದ ಬಳಿಕ ಅವರ ಜೀವನಶೈಲಿಯ ತುಣುಕುಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಯಾಕಿನ್ ರೆಸ್ಟೋರೆಂಟ್‍ನಲ್ಲಿ ತನ್ನ ತಂದೆ-ತಾಯಿಗೆ ಸಹಾಯಕಿಯಾಗಿ ದುಡಿಯುತ್ತಿದ್ದಾರೆ.

2024ರ ಪ್ಯಾರೀಸ್ ಒಲಿಂಪಿಕ್ಸ್ ನ ಬ್ಯಾಲೆನ್ಸ್ ಬೀಮ್ ಜಿಮ್ಯಾಸ್ಟಿಕ್ ಸ್ಪರ್ಧೆಯಲ್ಲಿ ಇಟೆಲಿಯ ಅಲಿಸ್ ಡಿ ಅಮಂಟೊ ಮತ್ತು ಮನಿಲಾ ಎಸ್ಪೊಸಿಟೊ ಅವರ ನಡುವೆ ಯಾಕಿನ್ ಬೆಳ್ಳಿಪದಕ ಗೆದ್ದರು. ಪೋಡಿಯಂನಲ್ಲಿ ತಮ್ಮ ಪದಕವನ್ನು ಕಚ್ಚುವ ಮೂಲಕ ಸಂತಸವನ್ನು ವ್ಯಕ್ತಪಡಿಸುತ್ತಿದ್ದ ಇಬ್ಬರ ನಡುವೆ ಮುಜುಗರದಿಂದ ತಾನು ಕೂಡಾ ಹಾಗೆ ಮಾಡುವ ಪ್ರಯತ್ನ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದೀಗ ಒಲಿಂಪಿಕ್ ಕೂಟ ಮುಗಿದ ಬಳಿಕ ಮತ್ತೊಮ್ಮೆ ಯಾಕಿನ್ ವೈರಲ್ ಆಗಿದ್ದಾರೆ. ಚೀನಾದ ಹ್ಯೂನನ್ ಪ್ರಾಂತ್ಯದ ಹೆಂಗ್ಯಂಗ್‍ನ ಹೋಟೆಲ್‍ನಲ್ಲಿ ಆಹಾರ ವಿತರಿಸುವ ಮೂಲಕ ತಮ್ಮ ಪೋಷಕರಿಗೆ ನೆರವಾಗುತ್ತಿರುವ ವಿಡಿಯೊ ತುಣುಕು ಎಲ್ಲೆಡೆ ಹರಿದಾಡುತ್ತಿದೆ. ಕೇವಲ ಮೂರು ವರ್ಷದವಳಿದ್ದಾಗ ಜಿಮ್ಯಾಸ್ಟಿಕ್ ಕ್ರೀಡೆಯಿಂದ ಆಕರ್ಷಿತರಾಗಿದ್ದ ಯಾಕಿನ್ 18ನೇ ವಯಸ್ಸಿನಲ್ಲೇ ಒಲಿಂಪಿಕ್ ಪದಕದ ಸಾಧನೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News