×
Ad

ಪಶ್ಚಿಮದಂಡೆ |ಇಸ್ರೇಲ್ ದಾಳಿಯಲ್ಲಿ ಮೂವರು ಫೆಲೆಸ್ತೀನೀಯರ ಮೃತ್ಯು

Update: 2024-08-22 21:16 IST

PC : PTI 

ರಮಲ್ಲಾ : ಪಶ್ಚಿಮದಂಡೆಯ ತುಲ್ಕಾರ್ಮ್ ಶಿಬಿರದಲ್ಲಿ ಗುರುವಾರ ಇಸ್ರೇಲ್ ಮಿಲಿಟರಿಯ ಕಾರ್ಯಾಚರಣೆ ಸಂದರ್ಭ ನಡೆದ ಡ್ರೋನ್ ದಾಳಿಯಲ್ಲಿ ಮೂವರು ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.

1948ರ ಮಧ್ಯಪ್ರಾಚ್ಯ ಯುದ್ಧದ ಸಂದರ್ಭ ಸ್ಥಳಾಂತರಗೊಂಡಿದ್ದ ನಿರಾಶ್ರಿತರ ಕುಟುಂಬಗಳು ನೆಲೆಸಿರುವ ತುಲ್ಕಾರ್ಮ್ ನಿರಾಶ್ರಿತರ ಶಿಬಿರದಲ್ಲಿ ಸಶಸ್ತ್ರ ಹೋರಾಟಗಾರರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ಸಂದರ್ಭ ಶಿಬಿರದ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಲದಡಿ ಹೂತಿಟ್ಟ ಬಂದೂಕು ಹಾಗೂ ಸುಧಾರಿತ ಸ್ಫೋಟಕ ಸಾಧನಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಮಧ್ಯೆ, ಕಳೆದ ವಾರ ಇಸ್ರೇಲ್ನ ಟೆಲ್ಅವೀವ್ ನಗರದಲ್ಲಿ ಬಾಂಬ್ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಎಂದು ಆರೋಪದಡಿ ಇಸ್ರೇಲ್ ಸೇನೆ ಹತ್ಯೆ ಮಾಡಿದ್ದ ವ್ಯಕ್ತಿ ಪಶ್ಚಿಮದಂಡೆಯ ನಬ್ಲೂಸ್ ನಗರದ ನಿವಾಸಿ ಎಂದು ಫೆಲೆಸ್ತೀನಿಯನ್ ಮಾಧ್ಯಮ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News