×
Ad

ಟ್ವಿಟರ್‌ ನ ಹೊಸ ಲೋಗೋ ಹೇಗಿರಲಿದೆ ?

Update: 2023-07-24 12:25 IST

(PTI Photo)

ಹೊಸದಿಲ್ಲಿ: ಕಳೆದೊಂದು ದಶಕಕ್ಕೂ ಹೆಚ್ಚು ಸಮಯದಿಂದ ಟ್ವಿಟ್ಟರ್‌ನ ಅವಿಭಾಜ್ಯ ಅಂಗವಾಗಿದ್ದ ಅದರ ನೀಲಿ ಹಕ್ಕಿಯ ಲೋಗೋ ಬದಲು ಶೀಘ್ರದಲ್ಲೇ ʼಎಕ್ಸ್‌ʼ ಲೋಗೋ ಕಾಣಿಸಿಕೊಳ್ಳಲಿದೆ ಎಂದು ಹೇಳುವ ಮೂಲಕ ಟ್ವಿಟರ್‌ ಲೋಗೋ ಬದಲಾವಣೆಯ ಸುಳಿವನ್ನು ಸಂಸ್ಥೆಯ ಮುಖ್ಯಸ್ಥೆ ಎಲಾನ್‌ ಮಸ್ಕ್‌ ರವಿವಾರ ನೀಡಿದ್ದಾರೆ.

ಚೀನಾದ ಟೆಕ್‌ ಸಂಸ್ಥೆ ಟೆನ್ಸೆಂಟ್‌ ಒಡೆತನದ ವಿಚ್ಯಾಟ್‌ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣ ಮತ್ತು ಪೇಮೆಂಟ್‌ ಆಪ್‌ ಫೀಚರ್‌ ಹೊಂದಿರುವ ಒನ್-ಸ್ಟಾಪ್‌ ಆಪ್‌ ಅಭಿವೃದ್ಧಿಪಡಿಸುವ ಇಚ್ಛೆಯನ್ನು ಮಸ್ಕ್‌ ಈ ಹಿಂದೆಯೇ ವ್ಯಕ್ತಪಡಿಸಿದ್ದರು.

ತಮ್ಮ‌ ಟ್ವಿಟರ್‌ ಖರೀದಿಯು ಎಲ್ಲವನ್ನೂ ಒಳಗೊಂಡ ಎಕ್ಸ್‌ ಆಪ್‌ ಅಭಿವೃದ್ಧಿಪಡಿಸುವತ್ತ ಒಂದು ಹೆಜ್ಜೆ ಎಂದೂ ಹಿಂದೊಮ್ಮೆ ಮಸ್ಕ್‌ ಹೇಳಿದ್ದರು.

ಅಂದ ಹಾಗೆ, ಮಸ್ಕ್‌ ಅವರಿಗೆ ಎಕ್ಸ್‌ ಅಕ್ಷರದ ಮೇಲೆ ಇನ್ನಿಲ್ಲದ ವ್ಯಾಮೋಹ. 1999ರಲ್ಲಿ ಅವರು ಎಕ್ಸ್‌.ಕಾಂ ಎಂಬ ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆಗಳ ಪ್ಲಾಟ್‌ಫಾರ್ಮ್‌ ಡೊಮೇನ್‌ ಖರೀದಿಸಿದ್ದರು. 2017ರಲ್ಲಿ ಈ ಡೊಮೇನ್‌ ಅನ್ನು ಮತ್ತೊಮ್ಮೆ ಖರೀದಿಸಿದ ಮಸ್ಕ್‌ ಅದನ್ನು ಇಲ್ಲಿಯ ತನಕ ಬಳಸಿರಲಿಲ್ಲ.

ಮಸ್ಕ್‌ ಅವರ ಕಂಪೆನಿಯ ಹೆಸರು ಸ್ಪೇಸ್‌ಎಕ್ಸ್‌ ಆಗಿದ್ದರೆ ಅವರ ಇ ಕಾರ್‌ ಮಾದರಿ ಎಕ್ಸ್‌ ಆಗಿದ್ದು ಅವರ ಒಬ್ಬ ಮಗನ ಹೆಸರಿನಲ್ಲೂ ಎಕ್ಸ್‌ ಅಕ್ಷರವಿದೆ.

ಈಗಾಗಲೇ ಮಸ್ಕ್‌ ಅವರು ಟ್ವಿಟರ್‌ ಮಾತೃ ಸಂಸ್ಥೆಯನ್ನು ಎಕ್ಸ್‌ ಕಾರ್ಪೊರೇಷನ್‌ ಎಂದು ಹೆಸರಿಸಿದ್ದಾರೆ. ಟ್ವಿಟರ್‌ ನ ಹೊಸ ಲಾಂಛನವು ಆರ್ಟ್‌ ಡೆಕೋ ಶೈಲಿಯಲ್ಲಿರಲಿದೆ ಎಂದೂ ಮಸ್ಕ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News