×
Ad

`ಹಸಿವಿನ ದುರಂತ' ನಿಲ್ಲಿಸುವಂತೆ ಇಸ್ರೇಲ್‍ ಗೆ ವಿಶ್ವ ಆರೋಗ್ಯ ಸಂಸ್ಥೆ ಆಗ್ರಹ

Update: 2025-09-06 21:35 IST

PC : news.un.org

ಜಿನೆವಾ, ಸೆ.6: ಗಾಝಾದಲ್ಲಿ ಜನರು ಹಸಿವೆಯಿಂದ ಸಾಯುತ್ತಿರುವ ದುರಂತವನ್ನು ನಿಲ್ಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಇಸ್ರೇಲನ್ನು ಆಗ್ರಹಿಸಿದ್ದಾರೆ.

ಗಾಝಾದಲ್ಲಿ ಯುದ್ಧ ಆರಂಭಗೊಂಡಂದಿನಿಂದ ಕನಿಷ್ಠ 370 ಮಂದಿ ಅಪೌಷ್ಠಿಕತೆಯಿಂದ ಸಾವನ್ನಪ್ಪಿದ್ದಾರೆ. ಇದು ಇಸ್ರೇಲ್ ತಡೆಯಬಹುದಾದ ಮತ್ತು ಯಾವುದೇ ಸಮಯದಲ್ಲಿ ನಿಲ್ಲಿಸಬಹುದಾದ ದುರಂತವಾಗಿದೆ. ಯುದ್ಧದ ವಿಧಾನವಾಗಿ ಜನರಿಗೆ ಆಹಾರ ನಿರಾಕರಿಸುವುದು ಯುದ್ಧಾಪರಾಧವಾಗಿದ್ದು ಅದನ್ನು ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಸಂಘರ್ಷದಲ್ಲಿ ಹಾಗೆ ಮಾಡುವುದರಿಂದ ಭವಿಷ್ಯದ ಸಂಘರ್ಷಗಳಲ್ಲಿ ಅದರ ಬಳಕೆಯನ್ನು ನ್ಯಾಯಸಮ್ಮತಗೊಳಿಸುವ ಅಪಾಯವಿದೆ' ಎಂದು ಘೆಬ್ರಯೇಸಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಜನರು ಹಸಿವೆಯಿಂದ ಸಾಯುತ್ತಿದ್ದರೆ ಅವರನ್ನು ಉಳಿಸಬಹುದಾದ ಆಹಾರವು ಸ್ವಲ್ಪ ದೂರದಲ್ಲಿ ಟ್ರಕ್‍ ಗಳಲ್ಲೇ ಬಾಕಿಯಾಗಿದೆ. ಗಾಝಾ ಜನರ ಹಸಿವು ಇಸ್ರೇಲನ್ನು ಸುರಕ್ಷಿತವಾಗಿಸುವುದಿಲ್ಲ ಅಥವಾ ಅದರಿಂದ ಒತ್ತೆಯಾಳುಗಳ ಬಿಡುಗಡೆಯಾಗುವುದಿಲ್ಲ. ಹಸಿವು ಇದ್ದಲ್ಲಿ ರೋಗಗಳು ಬೆನ್ನುಹಿಡಿಯುತ್ತವೆ' ಎಂದವರು ಹೇಳಿದ್ದಾರೆ.

2023ರ ಅಕ್ಟೋಬರ್‍ ನಲ್ಲಿ ಯುದ್ಧ ಆರಂಭಗೊಂಡಂದಿನಿಂದ ಗಾಝಾದಲ್ಲಿ ಹಸಿವು ಮತ್ತು ಅಪೌಷ್ಠಿಕತೆಯ ಸಮಸ್ಯೆಯಿಂದ 134 ಮಕ್ಕಳ ಸಹಿತ 373 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ವರದಿ ಮಾಡಿದೆ.

ರಶ್ಯ-ಉಕ್ರೇನ್ ಯುದ್ಧವನ್ನು ಸುಲಭವಾಗಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News