×
Ad

ಅಫಜಲಪುರ | ಮೇ 12ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

Update: 2025-05-10 22:38 IST

ಕಲಬುರಗಿ: ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಮೇ 12 ರಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಕುಮಾರ ಕೋಳಿಗೇರಿ ಹೇಳಿದರು.

ಅಫಜಲಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉರಿಲಿಂಗಪೆದ್ದೀಶ್ವರ ಸಂಸ್ಥಾನ ಶಾಖಾಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಮಹಾಭಾರತ ಧಾರಾವಾಹಿಯ ಬಾಲ ನಟ ಆಯುಧ ಭಾನುಶಾಲಿ ಆಗಮಿಸುತ್ತಿದ್ದಾರೆ ಎಂದರು.

ಅಂದು ಬೆಳಗ್ಗೆ 11 ಗಂಟೆಗೆ ಬೃಹತ್ ಬಹಿರಂಗ ಸಭೆ ಹಾಗೂ ಸಂಜೆ 5 ಗಂಟೆಗೆ ಡಾ.ಅಂಬೇಡ್ಕರ್ ಅವರ ಪುತ್ಥಳಿ ಭವ್ಯ ಮೆರವಣಿಗೆ ಸಾಗಲಿದೆ. ಈ ವೇಳೆ ಸಾನಿಧ್ಯವನ್ನು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಚನ್ನಮಲ್ಲ ಶಿವಾಚಾರ್ಯರು, ವೀರ ಮಹಾಂತ ಶಿವಾಚಾರ್ಯರು ವಹಿಸಲಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ಶಾಸಕ ಎಂ.ವೈ.ಪಾಟೀಲ್, ಅಧ್ಯಕ್ಷತೆ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಜ್ಯೋತಿ ಬೆಳಗಿಸುವವರು ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಪೂಜೆ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿವಿಧ ರಾಜಕೀಯ ಮುಖಂಡರು, ಸಾಹಿತಿಗಳು, ಪ್ರಜ್ಞಾವಂತರು, ಯುವಕರು ಪಾಲ್ಗೊಳ್ಳುವ ಮೂಲಕ ಈ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಾಂತೇಶ ಬಡದಾಳ, ಅರವಿಂದ ದೊಡ್ಮನಿ, ಮಹಾಂತೇಶ್ ಬಳೂಂಡಗಿ, ಶ್ರೀಶೈಲ ಕುಡಕಿ, ರವಿ ಗೌರ,ಶಶಿಕುಮಾರ ಆರೇಕರ್,ಶಿವು ಹೊಸ್ಮನಿ,ಮಂಜು‌ ಬಟಗೇರಿ,ಮಹೇಶ್ ದೊಡ್ಮನಿ, ದತ್ತು ಹರಿಜನ, ಮಹಾದೇವ ಬಂಕಲಗಿ, ಮಡಿವಾಳ ಕೆಳಗಿನ ಮನಿ,ಸುರೇಶ ಬಳೂಂಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News