×
Ad

ಕಲಬುರಗಿ | ರೈತ ದಿನಾಚರಣೆ : ಸಾಧಕರಿಗೆ ಪ್ರಶಸ್ತಿ ಪ್ರದಾನ

Update: 2025-12-26 17:36 IST

ಕಲಬುರಗಿ : ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ದಿನಾಚರಣೆ ಹಾಗೂ ಕಲ್ಯಾಣ ಕನಾಟಕ ಉತ್ಸವ ನಿಮಿತ್ತ ನಗರದ ಕನ್ನಡ ಭವನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಸಮಾರಂಭದಲ್ಲಿ ಸಾನಿಧ್ಯ ವಹಿಸಿದ ಡಾ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ, ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್.ಗಂವಾರ, ಜಿಲ್ಲಾಧ್ಯಕ್ಷ ಚಂದ್ರಕಾoತ ಪಿ.ಓಗೆ, ಭಗವಂತರಾಯ ಬೆಣ್ಣೂರ, ಶಾಂತಯ್ಯಾ ಸ್ವಾಮಿ ಸಾವರಮಠ, ಅಮೃತ ಪಾಟೀಲ ಸಿರನೂರ, ರವಿಕುಮಾರ ಒಂಟಿ, ಡಾ.ರಾಜಶೇಖರ ಪಾಟೀಲ ಮತ್ತಿತರರು ವೇದಿಕೆಯ ಮೇಲಿದ್ದರು.

ಈ ಸಂದರ್ಭದಲ್ಲಿ ಭಾಗರೆಡ್ಡಿ ಹೊತಿನಮಡು, ಸುಧೀರ್ ಬಂಡಪ್ಪಾ ಕಲಶೆಟ್ಟಿ, ರಾಜಶೇಖರ ಶಿಲ್ಪಿ, ರಾಮಚಂದ್ರ ಅವರಳ್ಳಿ, ಶ್ಯಾಮರಾವ ಪ್ಯಾಟಿ, ಪ್ರಭಾಕರ ರಾಮಜಿ, ಸಾಯಬಣ್ಣ ಪೂಜಾರಿ, ಅಲ್ಲಾವುದ್ದಿನ್ ನೆಲೋಗಿ, ಗುಂಡಪ್ಪ ಆಳಂದ, ಗುರು ತಳವಾರ, ಶಂಕರಲಿoಗ ಕರಕಿಹಳ್ಳಿ, ವಿಜಯಕುಮಾರ ನರೊಬೋಳ, ಪರಶುರಾಮ ಮದಬಾಳ, ದಾವಲಸಾಬ ಅತ್ತಾರ, ನಾಗರಾಜ ವಿ.ಟಿ, ಸಾಯಬನ್ಣ ತುರಾಯಿ, ಬಸವರಾಜ ಪಾಟೀಲ, ನಾನಾಗೌಡ ಹೊನ್ನಳ್ಳಿ, ಮಹಾಂತೇಶ ಪವ್ಹಾರ, ರವಿಕುಮಾರ ತಳವಾರ, ಬಸವರಾಜ ಬಿರಾದಾರ, ಸುಧಾ ಭಗಂತರಾಯ ಬೆಣ್ಣೂರ, ವಿಜಯಲಕ್ಷ್ಮಿ ಮಠಪತಿ, ಎಸ್.ಕೆ.ಬಿರಾದಾರ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News