×
Ad

ಅಫಜಲಪುರ | ಸಾವಿನಲ್ಲೂ ಒಂದಾದ ಸಹೋದರರು

Update: 2026-01-28 20:54 IST

ಅಫಜಲಪುರ: ತಾಲೂಕಿನ ಬಡದಾಳ ಗ್ರಾಮದ ಬಸವಂತರಾಯ ಸಿದ್ದಣ್ಣ ಸಾಣಾಕ್ (81) ಅವರು ಜ.25ರಂದು ರಾತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಜ.26ರಂದು ಸಂಜೆ 4 ಗಂಟೆಗೆ ಅವರ ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕಿರಿಯ ಸಹೋದರ ಶಿವರಾಯ ಸಿದ್ದಣ್ಣ ಸಾಣಾಕ್ (79) ಅವರು ಅಣ್ಣನ ಅಗಲಿಕೆಯ ನೋವಿನಿಂದ ತೀವ್ರವಾಗಿ ಮನನೊಂದು ಮನೆಗೆ ಮರಳಿದ್ದರು. ಆದರೆ ಅದೇ ದಿನ ರಾತ್ರಿ ಸುಮಾರು 8 ಗಂಟೆಗೆ ಅಣ್ಣನ ನಿಧನದ ದುಃಖ ಸಹಿಸಲಾರದೆ ಅವರು ನಿಧನರಾದ ದಾರುಣ ಘಟನೆ ನಡೆದಿದೆ.

ಒಂದೇ ದಿನದ ಅಂತರದಲ್ಲಿ ಇಬ್ಬರು ಸಹೋದರರು ನಿಧನರಾದದ್ದು ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ವಿಶೇಷವೆಂದರೆ, ಕಿರಿಯ ಸಹೋದರ ಶಿವರಾಯ ಸಾಣಾಕ್ ಅವರ ಅಂತ್ಯಕ್ರಿಯೆಯೂ ಹಿರಿಯ ಅಣ್ಣನ ಅಂತ್ಯಕ್ರಿಯೆ ನಡೆದ ಅದೇ ತೋಟದ ಪಕ್ಕದಲ್ಲೇ ನೆರವೇರಿತು.

ಬದುಕಿರುವಾಗ ಸಹೋದರ ವಾತ್ಸಲ್ಯಕ್ಕೆ ಮಾದರಿಯಾಗಿದ್ದ ಈ ಸಹೋದರರು, ಸಾವಿನಲ್ಲೂ ಒಂದಾಗಿ ಉಳಿದ ಅಪರೂಪದ ಘಟನೆ ಗ್ರಾಮದಲ್ಲಿ ಕಂಬನಿಯನ್ನು ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News