ಕಲಬುರಗಿ | ಹೃದಯಾಘಾತದಿಂದ ಎಇಇ ನಾಗಮೂರ್ತಿ ಶೀಲವಂತ್ ಮೃತ್ಯು
Update: 2026-01-28 21:33 IST
ಕಲಬುರಗಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಜೇವರ್ಗಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಬ್ಬರು(ಎಇಇ) ಬುಧವಾರ ಹೃದಯಾಘಾತದಿಂದಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಜೇವರ್ಗಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ ಹಾಗೂ ಕಾಳಗಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗಮೂರ್ತಿ ಶೀಲವಂತ್ (45) ಮೃತಪಟ್ಟ ಅಧಿಕಾರಿಯಾಗಿದ್ದಾರೆ.
ಅವರು ಕಲಬುರಗಿ ನಗರದ ಹೌಸಿಂಗ್ ರ್ಬೋಡ್ ಕಾಲನಿಯಲ್ಲಿ ವಾಸವಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿ ಸೇರಿ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ. ಆಳಂದ ತಾಲೂಕಿನ ಲಾಡಚಿಂಚೋಳಿ ಗ್ರಾಮದಲ್ಲಿರುವ ಸ್ವಂತ ಹೊಲದಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.