×
Ad

Afzalpur | ಮೂರನೇ ದಿನಕ್ಕೂ ಕಾಲಿಟ್ಟ ರೈತರ ಧರಣಿ ಸತ್ಯಾಗ್ರಹ : ಬೇಡಿಕೆ ಈಡೇರದಿದ್ದರೆ ತಾಲೂಕು ಬಂದ್

Update: 2026-07-16 22:07 IST

ಅಫಜಲಪುರ: ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೂ ಮುಂದುವರಿದಿದ್ದು, ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಗಲು-ರಾತ್ರಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು, ಭೀಮಾ ನದಿಯಲ್ಲಿ ನೀರಿನ ಕೊರತೆಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಬೆಳೆಗಳು ಒಣಗುತ್ತಿವೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಭೀಮಾ ನದಿಗೆ ನೀರು ಹರಿಸಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರೈತರ ಸಂಪೂರ್ಣ ಸಾಲಮನ್ನಾ, ಬರ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಶೀಘ್ರವೇ ಸ್ಪಂದಿಸದಿದ್ದರೆ ತಾಲೂಕು ಬಂದ್, ಹೆದ್ದಾರಿ ತಡೆ ಸೇರಿದಂತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ರಮೇಶ ಹವಳಗಾ, ಹಿರಿಯ ವಕೀಲ ಶಂಕರಾವ ಹುಲ್ಲೂರ, ಕಲಾವಿದ ಚಂದು ಬನ್ನಟ್ಟಿ, ಸಿದ್ದಣ್ಣಗೌಡ ಪಾಟೀಲ,ಭೀಮರಾಯ ಗೌರ, ಮುರುಗೇಂದ್ರ ಮಸಳಿ, ಲತ್ತಿಪ್ಪ ಪಟೇಲ, ರಮೇಶೆಟ್ಟಿ, ಶಾಂತು ಅಂಜುಟಗಿ, ರಮೇಶ್ ಪಾಟೀಲ್, ಶ್ರೀಮಂತ ಬಿರಾದರ್, ಬಸವರಾಜ ಗಾಣೂರ, ಭೀಮರಾಯ ತಳವಾರ, ಧನರಾಜ್ ಕೈರಾಟ್, ನೂರಮದ್, ಭಗವಾನ್, ರಾಜುಗೌಡ ಬಾಸಿಗಿ, ನಿಸಾರ್ ಪಟೇಲ್, ಕಾಸಿಂ ಪಟೇಲ್, ಮಹಿಬೂಬ್ ಪಟೇಲ್, ಚೌಮುರದಿನ್ ಪಟೇಲ್, ಶಿವಾನಂದ ಪೂಜಾರಿ, ಬಸಣ್ಣ ದೊಡ್ಡಮನಿ, ಚಾಂದ್‌ಸಾಬ್ ಕುಕುನೂರು, ಹುಲೆಪ್ಪ ಪೂಜಾರಿ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News