×
Ad

ಅಫಜಲಪುರ | ತಂದೆ-ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ: ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು

Update: 2026-02-02 17:54 IST

ಅಫಜಲಪುರ : ಜೀವನದಲ್ಲಿ ಏನು ಮಾಡಿದರೂ ಜನ್ಮ ನೀಡಿದ ತಂದೆ–ತಾಯಿಯ ಋಣವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ದೇವರ ರೂಪದಲ್ಲಿ ಕಾಣುವಾಗ ಮಾತ್ರ ನಿಜವಾದ ಋಣ ತೀರಿಸಿದಂತಾಗುತ್ತದೆ ಎಂದು ಬಡದಾಳದ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.

ತಾಲೂಕಿನ ನೀಲೂರ ಗ್ರಾಮದ ಶ್ರೀ ಬಂಗಾರ ಜಡೆ ನೀಲಕಂಠೇಶ್ವರ ಜಾತ್ರಾ ಮಹೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ತಂದೆ–ತಾಯಿಗೆ ತೊಂದರೆ ನೀಡಿ ನಂತರ ಶ್ರೀಶೈಲ, ಮಂತ್ರಾಲಯದಂತಹ ಪುಣ್ಯಕ್ಷೇತ್ರಗಳಿಗೆ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ. ಸತ್ತ ನಂತರ ಪುಣ್ಯಸ್ಮರಣೆ ಮಾಡುವುದು ಕೇವಲ ನಾಟಕೀಯತೆ ಮಾತ್ರ ಎಂದು ತಿಳಿಸಿದರು.

ಒಬ್ಬ ತಾಯಿ ಹತ್ತು ಮಕ್ಕಳನ್ನು ಸಾಕಿ ಬೆಳೆಸುವ ಶಕ್ತಿ ಹೊಂದಿದ್ದರೂ, ಹತ್ತು ಮಕ್ಕಳು ಸೇರಿಕೊಂಡು ಒಬ್ಬ ತಾಯಿಯನ್ನು ನೋಡಿಕೊಳ್ಳಲು ಆಗದಂತಹ ವಿಪರ್ಯಾಸ ಇಂದಿನ ಸಮಾಜದಲ್ಲಿ ಕಾಣುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಧರ್ಮದರ್ಶಿ ಶರಣಯ್ಯ ಸ್ವಾಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ್ ಪಾಳಾ, ಶರಣಬಸಪ್ಪ ಪದಕಿ, ಅಂಬರಾಯ ಕೋಣೆ, ಶಿವಶಂಕರ್ ಬಿರಾದಾರ, ಸಂಗಮನಾಥ ಹೂಗಾರ, ಸಾಯಬಣ್ಣ ಹೂಗಾರ, ಯೋಗಿರಾಜ್, ಭಗವಂತರಾವ ಕಾಮಜಿ, ಮಲ್ಲಿನಾಥ ಅಷ್ಟಗಿ, ವೀರಭದ್ರಪ್ಪ ಪಾಟೀಲ್, ಮಲ್ಲಿನಾಥ ಕಾಮಜಿ, ಸಂಗಮನಾಥ ಅಷ್ಟಗಿ, ಈರಣ್ಣ ಲೋಣಿ, ನಾಗಪ್ಪ ಠಕ್ಕಾ, ಬಾಹುರಾವ ಕುಲಕರ್ಣಿ, ಭೀಮಾಶಂಕರ ಪಗಡಿ, ಶಿವಲಿಂಗಪ್ಪ ಮುಗದಿ, ವೈಜನಾಥ ಸಾವಳಗಿ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.

ಬಂಗಾರದ ಅಂಗಾರ ಪ್ರಶಸ್ತಿ ಪ್ರದಾನ :

ಕಾರ್ಯಕ್ರಮದಲ್ಲಿ ಶಿವರುದ್ರಯ್ಯ ಸ್ವಾಮಿ ಗೌಡಗಾಂವ(ಗವಾಯಿ)ಹಾಗೂ ಶಾಂತಕುಮಾರ ಜೇರಟಗಿ(ತಬಲಾ ವಾದಕರು) ಇಬ್ಬರನ್ನು ಬೆಳ್ಳಿ ಕಿರೀಟದೊಂದಿಗೆ ಬಂಗಾರದ ಅಂಗಾರ ಪ್ರಶಸ್ತಿ ನೀಡಿ ಗೌರವಿಸಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News