ಅಫಜಲಪುರ: ತಾಲೂಕಿನ ಚಿಂಚೋಳಿ ಗ್ರಾಮದ ದಿ. ಡಾ. ಸಿದ್ದಣ್ಣ ಕೊಳ್ಳಿ ಅವರ 2ನೇ ವರ್ಷದ ಪುಣ್ಯಸ್ಮರಣಾರ್ಥ ಗ್ರಾಮದ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರ ಸಾನಿಧ್ಯದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೆನ್ ಹಾಗೂ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.

ಸಾನಿಧ್ಯ ವಹಿಸಿದ್ದ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಗ್ರಾಮದ ದಿ. ಡಾ. ಸಿದ್ದಣ್ಣ ಕೊಳ್ಳಿ ಅವರು ಕಡು ಬಡತನದಲ್ಲಿ ವಿಶ್ವವಿದ್ಯಾಲಯದ ಮಟ್ಟದವರೆಗೆ ವ್ಯಾಸಂಗ ಮಾಡಿ, ಡಿಗ್ರಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅನೇಕ ವಿದ್ಯಾವಂತ ಯುವಕರಿಗೆ ಪ್ರೇರಣೆಯಾಗಿದ್ದರು. ಸಿದ್ದಣ್ಣ ಕೊಳ್ಳಿ ಅವರ ಸರಳತೆಯ ಬದುಕು ಎಲ್ಲರಿಗೂ ಮಾದರಿಯಾಗಿತ್ತು. ಸಣ್ಣ ವಯಸ್ಸಿನಲ್ಲಿಯೇ ಅನಾರೋಗ್ಯ ಆವರಿಸಿದ್ದರಿಂದ ಸೇವೆಯಲ್ಲಿಯೇ ನಿಧನರಾಗಿರುವುದು ಅಪಾರ ನಷ್ಟವನ್ನುಂಟು ಮಾಡಿದೆ. ಶಿಕ್ಷಣದ ಮೇಲಿನ ಅಪಾರ ಕಾಳಜಿಯಿಂದ ಅವರ ಕುಟುಂಬದವರು ಶಾಲಾ ಮಕ್ಕಳ ಓದಿಗೆ ಅನುಕೂಲವಾಗಲೆಂದು ಪೆನ್ ಹಾಗೂ ನೋಟ್‌ಬುಕ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

ಮಹಾನಾಯಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ನಾಗೇಶ ಕೊಳ್ಳಿ ಮಾತನಾಡಿ, ಸಹೋದರ ಡಾ. ಸಿದ್ದಣ್ಣ ಕೊಳ್ಳಿ ಅವರು ಜೀವಿತಾವಧಿಯಲ್ಲಿ ಶಿಕ್ಷಣವನ್ನು ಅತ್ಯಂತ ಗೌರವಿಸುತ್ತಿದ್ದರು. ತಮ್ಮ ಸೇವಾವಧಿಯಲ್ಲಿ ಅನೇಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡಿದ್ದಾರೆ. ವಿದ್ಯಾರ್ಥಿಗಳ ಬಳಗಕ್ಕೆ ಅವರು ಅತ್ಯಂತ ಹತ್ತಿರವಾಗಿದ್ದರಿಂದ ಇಂದು ಅವರ ಪುಣ್ಯಸ್ಮರಣೆಯಂದು ವಿದ್ಯಾರ್ಥಿಗಳಿಗೆ ಪೆನ್ ಹಾಗೂ ನೋಟ್‌ಬುಕ್ ವಿತರಿಸಲಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮುಖ್ಯಗುರು ಎಂ.ಡಿ.ಪಟೇಲ, ವಿಶ್ವನಾಥ್ ವಾಲಿ, ನಾನ ರಾಠೋಡ, ಸುಧಾಬಾಯಿ ಬಿರಾದಾರ, ಅಣ್ಣಾರಾಯ ಹಡಲಗಿ, ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಚಿದಾನಂದ ಬಸರಿಗಿಡ, ಶರಣು ಬಡದಾಳ, ಉಮಾಕಾಂತ್ ರಾಠೋಡ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor