×
Ad

ಆಳಂದ: ಮಡಿವಾಳ ಮಾಚಿದೇವರ 926ನೇ ಜಯಂತಿ ಆಚರಣೆ

Update: 2026-02-01 18:41 IST

ಆಳಂದ: ಆಳಂದ ತಾಲೂಕು ಆಡಳಿತ ಸೌಧದಲ್ಲಿ ಶರಣ ವೀರಘಂಟೆ ಮಡಿವಾಳ ಮಾಚಿದೇವರ 926ನೇ ಜಯಂತಿಯನ್ನು ಭಕ್ತಿಭಾವ, ಸಾಮಾಜಿಕ ಜಾಗೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಭಾವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ್–2 ತಹಸೀಲ್ದಾರ್‌ ಬಿ.ಜಿ. ಕುದರಿ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶರಣರ ಜೀವನ ಆದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಾಸಂಗಿಕವಾಗಿವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಮಡಿವಾಳ ಸಮಾಜದ ಮುಖಂಡ ಶಾಂತಕುಮಾರ ಪಿ. ಮಡಿವಾಳ, 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದ ಚಳುವಳಿಯ ಭಾಗವಾಗಿ ಕಾಯಕ–ದಾಸೋಹದ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆ, ಶ್ರಮದ ಗೌರವ ಹಾಗೂ ಮಾನವೀಯತೆಯ ಸಂದೇಶ ಸಾರಿದ ಶರಣ ಮಡಿವಾಳ ಮಾಚಿದೇವರು ಜಾತ್ಯಾತೀತ ಸಮಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಮಡಿವಾಳ ಸಮಾಜದ ಅಧ್ಯಕ್ಷ ಬಸವರಾಜ ಕೊರಳಿ, ರುಕ್ಕಪ್ಪ ಮಡಿವಾಳ, ಕಲ್ಯಾಣ ಕರ್ನಾಟಕ ಕಲ್ಯಾಣ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಶರಣು ಕುಲಕರ್ಣಿ, ಹಿರಿಯ ನಾಗೇಂದ್ರಪ್ಪ ರೆಡ್ಡಿ, ಮಹಾನಿಂಗಪ್ಪ ಕೌಂಟೆ, ಕಾಶಿನಾಥ ಎನ್. ಮಡಿವಾಳ, ಹಿರಿಯ ಪರಮೇಶ್ವರ ಮಡಿವಾಳ ಸೇರಿದಂತೆ ಸಮಾಜದ ದತ್ತು, ಶ್ರೀಶೈಲ, ಶಿವಶಂಕರ, ರಾಜು ಡಿ. ಪರಿಟ್, ಶಾಂತಪ್ಪ, ಶಿವಪ್ಪ ಆರ್., ಹಣಮಂತ ನಿಜಲಿಂಗಪ್ಪ ಸೇರಿದಂತೆ ಅನೇಕ ಗಣ್ಯರು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News