×
Ad

ಕಲಬುರಗಿ | ಮಹಾನಗರ ಪಾಲಿಕೆಯಿಂದ ಕಲುಷಿತ ನೀರು ಸರಬರಾಜು: ಡಾ.ಸುಧಾ ಹಾಲಕಾಯಿ ಆರೋಪ

Update: 2026-01-31 20:18 IST

ಕಲಬುರಗಿ: ಕಲಬುರಗಿ ನಗರ ನಿವಾಸಿಗಳಿಗೆ ಮಹಾನಗರ ಪಾಲಿಕೆಯಿಂದ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಉಸ್ತುವಾರಿ ಸಚಿವರು ಮೌನ ವಹಿಸಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಡಾ.ಸುಧಾ ಹಾಲಕಾಯಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿ ನಗರಕ್ಕೆ ಸರಬರಾಜು ಮಾಡುತ್ತಿರುವ ಭೀಮಾ ನದಿ ನೀರಿಗೆ ಕೊಳಚೆ ನೀರು ವ್ಯಾಪಕವಾಗಿ ಸೇರುತ್ತಿದೆ. ನಗರ ಪಾಲಿಕೆಯ ನೀರು ಶುದ್ದಿಕಾರಣ ಘಟಕ ಸಮರ್ಪಕ ರೀತಿಯಲ್ಲಿ ಕಾರ್ಯರ್ವಹಿಸದೆ ಸ್ಥಗಿತಗೊಂಡರೂ ಇದಕ್ಕೆ ಜನಪ್ರತಿನಿಧಿಗಳು ಮೌನವಾಗಿದ್ದಾರೆ ಎಂದು ಆರೋಪಿಸಿದರು.

ಭೀಮಾ ನದಿಯ ನೀರನ್ನೇ ಅವಲಂಬಿಸಿರುವ ಇಲ್ಲಿನ ಜನತೆಗೆ ಸರಕಾರ ಯೋಗ್ಯವಾದ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಎಡವಿದೆ. ಕೂಡಲೇ ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News