ಕಲಬುರಗಿ | ಜಾಗತಿಕ ವೇಗವರ್ಧಕ ವಿಷನ್ ಶೃಂಗಸಭೆ: ಕಲಬುರಗಿಯಲ್ಲಿ ಬೈಕ್ ಜಾಥಾ
ಕಲಬುರಗಿ: ಜಾಗತಿಕ ವೇಗವರ್ಧಕ ವಿಷನ್ ಶೃಂಗಸಭೆ–2026ರ ಅಂಗವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಕಲಬುರಗಿ ಜಿಲ್ಲಾ ಸಮಿತಿ ಹಾಗೂ ಆರ್ಯವೈಶ್ಯ ಸಮಾಜದ ವತಿಯಿಂದ ಶುಕ್ರವಾರ ನಗರದಲ್ಲಿ ಬೈಕ್ ಜಾಥಾ ನಡೆಸಲಾಯಿತು.
‘ಉಜ್ವಲ ಭವಿಷ್ಯಕ್ಕಾಗಿ ಸವಾರಿ’ ಎಂಬ ಸಂದೇಶದೊಂದಿಗೆ ಶ್ರೀ ನಗರೇಶ್ವರ ಶಾಲೆಯಿಂದ ಆರಂಭಗೊಂಡ ರ್ಯಾಲಿಯು ರಿಂಗ್‌ರೋಡ್, ಅನ್ನಪೂರ್ಣ ಕ್ರಾಸ್ ಹಾಗೂ ಸೇಡಂ ರಸ್ತೆ ಮೂಲಕ ಸಾಗಿತು. ಆರ್ಯವೈಶ್ಯ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಹಾಗೂ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ವತಿಯಿಂದ ಬೀದರ್‌ನಿಂದ ಬಳ್ಳಾರಿವರೆಗೆ ಶೃಂಗಸಭೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಬೈಕ್ ರ್ಯಾಲಿಯ ಭಾಗವಾಗಿ ಕಲಬುರಗಿಯಲ್ಲೂ ರ್ಯಾಲಿ ಆಯೋಜಿಸಲಾಗಿತ್ತು. ಏಕತೆ, ಸೇವೆ ಹಾಗೂ ಪ್ರಗತಿಯ ಮೂಲಕ ಉತ್ತಮ ಭವಿಷ್ಯ ನಿರ್ಮಿಸುವ ಸಂದೇಶವನ್ನು ರ್ಯಾಲಿ ಸಾರಿತು.
ಕಲಬುರಗಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಘವೇಂದ್ರ ಕೆ. ಮೈಲಾಪುರ, ಕಾರ್ಯದರ್ಶಿ ಸಂಜೀವ್ ಗುಪ್ತಾ, ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಬೆಂಗಳೂರು ವಲಯ ಕಾರ್ಯದರ್ಶಿ ವೀರೇಶ ಎಸ್. ವಾಗಣಗೇರಿ, ಮಹಾಸಭಾ ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೆ, ಮಹಿಳಾ ಮಂಡಳಿ ಅಧ್ಯಕ್ಷೆ ಶಾರದಾ ಎಸ್. ಪರಸ್ವರ್, ವಾಸವಿ ಯುವತಿ ಮಂಡಳಿ ಅಧ್ಯಕ್ಷೆ ನೀತಾ ವಿ. ಮಾದಮಶೆಟ್ಟಿ, ವಾಸವಿ ಯುವಜನ ಸಂಘದ ಅಧ್ಯಕ್ಷ ರೋಹನ್ ಆರ್. ಉಪ್ಪಳ್ಳಿ, ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಆರತಿ ತಾವರ್ಗೇರಾ ಹಾಗೂ ಅವೋಪಾ ಅಧ್ಯಕ್ಷ ಹನ್ಮಯ್ಯ ಬೇಲೂರೆ ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.
ಬೈಕ್ ರ್ಯಾಲಿಯ ವಿಶೇಷ ಅತಿಥಿಗಳಾದ ಎಚ್.ಜೆ. ಹನುಮಂತಯ್ಯ, ಭೀಮರಾಜ್ ಗಂಗಾವತಿ, ರಾಮಚಂದ್ರ ಆರ್. ಅಮ್ಮನ್ ಹಾಗೂ ರಾಮಚಂದ್ರ ಡಿ.ರಘೋಜಿ ಉಪಸ್ಥಿತರಿದ್ದರು.
ಮಹಾಸಭಾ ಜಿಲ್ಲಾ ಸಮಿತಿ ಉಪಾಧ್ಯಕ್ಷ ರವೀಂದ್ರ ಮಾದಮಶೆಟ್ಟಿ, ಕಾರ್ಯದರ್ಶಿ ಪ್ರಶಾಂತ್ ಅಟ್ನೂರು, ಸಹ ಕಾರ್ಯದರ್ಶಿ ವೇಣುಗೋಪಾಲ ಮಾದಮಶೆಟ್ಟಿ, ಸದಸ್ಯರಾದ ಅಶೋಕ್ ಬಾವಗಿ, ಸತ್ಯನಾರಾಯಣ ವನ್ಮಾಲಿ, ಶೈಲಜಾ ಮದರಗಾಂವ್, ಮೀರಾ ಡಿ.ರಘೋಜಿ, ಶ್ರೀದೇವಿ ಎಂ. ಗಂಗಾ, ಸುರೇಖಾ ಎಸ್. ವಾಗಣಗೇರಿ ಹಾಗೂ ಗೀತಾ ಆರ್. ಗಾಂಪಾ ಸೇರಿದಂತೆ ಜಿಲ್ಲಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.