×
Ad

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ರಮಕ್ಕೆ ಚಾಲನೆ

Update: 2025-05-05 18:02 IST

ಕಲಬುರಗಿ : ಒಳ ಮತ್ತು ಹೊರ ಆವರಣದಲ್ಲಿ ಅರವಟಿಕೆ ಮೂಲಕ ಪಕ್ಷಿಗಳಿಗೆ ನೀರು ಕುಡಿಸುವ (ಉಣಿಸುವ) ಕಾರ್ಯಕ್ರಮವನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಹಮ್ಮಿಕೊಳ್ಳಲಾಯಿತು.

ಈ ಸಂಸ್ಥೆಯ ಮುಖ್ಯಸ್ಥ ಡಾ.ಅನಿತಾ ಆರ್. ಅವರು ಎಲ್ಲಾ ಅಧಿಕಾರಿ/ ಸಿಬ್ಬಂದಿಗಳೊಂದಿಗೆ ಪಕ್ಷಿಗಳಿಗೆ ನೀರು ಉಣಿಸುವ (ಕುಡಿಸುವ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಾನವನ ಸುಂದರ ಬದುಕಿಗೆ ಸ್ಫೂರ್ತಿದಾಯಕವಾದ ವಾತಾವರಣವನ್ನು ಪಶು-ಪಕ್ಷಿಗಳಿಂದ ಸಿಗಲಿದ್ದು, ನಾವು ಬದುಕುವುದಕ್ಕೆ ಆಹಾರ ನೀರು ಎಷ್ಟು ಮುಖ್ಯವೋ ಅದೇ ರೀತಿ ಮೂಕ ಪಶು-ಪಕ್ಷಿಗಳಿಗೂ ಕೂಡ ಆಹಾರ ನೀರು ಅಷ್ಟೆ ಅವಶ್ಯಕವಾಗಿದೆ. ನಾನು ಅವುಗಳ ಸಂರಕ್ಷಣೆಯನ್ನು ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪಕ್ಷಿಗಳಿಗೆ ಪ್ರತಿಯೊಬ್ಬರು ಆಹಾರ ಮತ್ತು ನೀರನ್ನು ನೀಡುವುದರ ಮೂಲಕ ಅವುಗಳನ್ನು ಕಾಪಾಡಬೇಕು ಎಂದರು.

ಸುಮಾರು 100 ಅರವಟಿಕೆ ಮೂಲಕ ಪಕ್ಷಿಗಳಿಗೆ ನೀರು ಒದಗಿಸುವುದಕ್ಕೆ ಗಿಡಗಳಿಗೆ ಕಟ್ಟಿ ನೀರನ್ನು ಕುಡಿಸಲಾಯಿತು.

ಕಾರ್ಯಕ್ರಮದಲ್ಲಿ ಕಚೇರಿಯ ಅಧೀಕ್ಷಕ ಎಮ್. ಹೆಚ್.ಆಶೇಖಾನ್, ಜೈಲರ್‍ಗಳಾದ ಸಾಗರ ಪಾಟೀಲ್, ಶ್ರೀಮಂತ ಪಾಟೀಲ್, ಶಾಮ ಬಿದರಿ ಹಾಗೂ ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ ಹಾಗೂ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿ ಅರವಟಿಕೆಗಳನ್ನು ಕಟ್ಟಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News