ಆಳಂದ| ಜಾತಿ ಗಣತಿಯಲ್ಲಿ ನಿರ್ಲಕ್ಷ್ಯ: ಛಲವಾದಿ ಮಹಾಸಭಾ ಆರೋಪ
Update: 2025-05-14 00:01 IST
ಕಲಬುರಗಿ: ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ವತಿಯಿಂದ ಆಳಂದದ ಅತಿಥಿ ಗೃಹದಲ್ಲಿ ಮಂಗಳವಾರ ಒಳ ಮೀಸಲಾತಿ ಜಾತಿ ಗಣತಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಗಣತಿದಾರರಿಂದ ನಿರ್ಲಕ್ಷ್ಯ ತೋರುತ್ತಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಜಿಲ್ಲಾ ಕಮಿಟಿಯವರು ಆಗಮಿಸಿ ಸಮಸ್ಯೆಯನ್ನು ಸರಿಪಡಿಸುವಂತೆ ತಾಲೂಕು ಮಟ್ಟದ ಸಮಿತಿಗೆ ಸೂಚನೆ ನೀಡಿದರು.
ಜಿಲ್ಲಾ ಕಮಿಟಿಯ ಮಧ್ಯಸ್ಥಿಕೆಯಿಂದ ಗಣತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರ ವಿಶಾಲ್ ದರ್ಗೆ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮಹದೇವ ಮೊಘಾ, ಸಂಘಟನಾ ಕಾರ್ಯದರ್ಶಿ ಅರುಣ್ ಭರಣಿ, ಚಂದ್ರಕಾoತ ವಾಲಿ, ಪ್ರಭು ಶಿಲ್ದ, ಡಾ. ಶಿವಪ್ಪ ಕಡಗಂಚಿ, ಗುಂಡಪ್ಪ ಡೋಣಿ, ಲಕ್ಷ್ಮಿಕಾಂತ ಭಜನ, ಮಲ್ಲಿಕಾರ್ಜುನ ಶೃಂಗೇರಿ, ಅಜಯ ಮಂಟಗಿಕರ್, ನಾಗಪ್ಪ ಸಿಂಗೆ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.