ಚಿತ್ತಾಪುರ: ಕೋಲಿ ಸಮಾಜದ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಹಣಮಂತ ಸಂಕನೂರ ಮತ್ತು ರಾಮಲಿಂಗ ಬಾನಾರ್ ಹೊಸ್ಸರ್ ಅವರನ್ನು ಸರ್ಕಾರದ ಯಾವುದಾದರೂ ನಿಗಮ ಅಥವಾ ಮಂಡಳಿಗೆ ನಾಮನಿರ್ದೇಶನ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಹಾಗೂ ಕೋಲಿ ಸಮಾಜದ ಮುಖಂಡರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.

ಸಲ್ಲಿಸಿದ ಮನವಿಯಲ್ಲಿ, ಹಣಮಂತ ಸಂಕನೂರ ಮತ್ತು ರಾಮಲಿಂಗ ಬಾನಾರ್ ಹೊಸ್ಸರ್ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಗಾಗಿ ಸೇವೆ ಸಲ್ಲಿಸುತ್ತಿದ್ದು, ಪಕ್ಷದ ತತ್ವ, ಸಿದ್ಧಾಂತ ಮತ್ತು ನೀತಿಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ವಿಧಾನಸಭೆ, ಲೋಕಸಭೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಚಿತ್ತಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋಲಿ ಸಮಾಜದ ಮತಗಳನ್ನು ಕಾಂಗ್ರೆಸ್ ಪರವಾಗಿ ಒಗ್ಗೂಡಿಸುವಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದು, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅವರ ದೀರ್ಘಕಾಲದ ಪಕ್ಷನಿಷ್ಠೆ ಹಾಗೂ ಸಂಘಟನಾ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಸೂಕ್ತ ನಿಗಮ ಅಥವಾ ಮಂಡಳಿಯಲ್ಲಿ ಜವಾಬ್ದಾರಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಶರಣಪ್ಪ ನಾಶಿ, ಬಸವರಾಜ ಚಿನ್ನಮಳ್ಳಿ, ಪೃಥ್ವಿರಾಜ್ ನಾಮದಾರ, ಮುನಿಯಪ್ಪ ಕೊಳ್ಳಿ, ಮಲ್ಲಿಕಾರ್ಜುನ ಅಲ್ಲೂರ ಮಾಲಗತ್ತಿ, ಕರಣಕುಮಾ‌ರ್ ಅಲ್ಲೂರ, ಮಲ್ಲಿಕಾರ್ಜುನ ಸಂಗಾವಿ, ಪ್ರಭು ಹಲಕರ್ಟಿ, ಬಸವರಾಜ ಜಕಾತಿ, ಶರಣಪ್ಪ ಹಿಟ್ಟಿನ್, ಈರಣ್ಣ ಇಸಬಾ, ಸಾಬಣ್ಣ ಸಿದ್ರಾಮಗೋಳ, ಶರಣು ಮೆಂಗಾ, ದೇವು ಯಾಬಾಳ, ಮಲ್ಲಿಕಾರ್ಜುನ ಹೊನ್ನಪೂರ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor