×
Ad

ʼಸಂವಿಧಾನ ಸಂರಕ್ಷಣಾ ಪಡೆ ಬೈಕ್ ರ್‍ಯಾಲಿʼಗೆ ಕಲಬುರಗಿಯಲ್ಲಿ ಸ್ವಾಗತ

Update: 2025-04-16 15:55 IST

ಕಲಬುರಗಿ : ಡಾ.ಅಂಬೇಡ್ಕರ್ ಜಯಂತಿಯ ನಿಮಿತ್ತ ಅಂಬೇಡ್ಕರ್ ಸ್ಪರ್ಶ ಭೂಮಿ ವಾಡಿಯಿಂದ ಆರಂಭವಾಗಿದ ಸಂವಿಧಾನ ಸಂರಕ್ಷಣಾ ಪಡೆಯ ಬೈಕ್ ರ್‍ಯಾಲಿಗೆ ಕಲಬುರಗಿಯಲ್ಲಿ ಬುಧವಾರ ವಿವಿಧ ಸಂಘಟನೆಯ ಮುಖಂಡರು ಸ್ವಾಗತಿಸಿದ್ದರು.

ನಗರದ ಜಗತ್ ವೃತದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂದೆ ಬೈಕ್ ರ್‍ಯಾಲಿಗೆ ಜಮಾಆತ್ ಎ ಇಸ್ಲಾಮಿ ಸದಸ್ಯ ಅಬ್ದುಲ್ ಖಾದರ್ ಸ್ವಾಗತಿಸಿದರು.

ಈ ವೇಳೆ ಪುಟ್ಟಮಣಿ ದೇವಿದಾಸ್ ಮತ್ತು ವೇಲ್ಫರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಮುಖಂಡ ಮುಬೀನ್ ಅಹ್ಮದ್, ಬಾಬಾ ಹುಂಡೆಕರ್ ಮಾತನಾಡಿದರು.

ಸರಕಾರ ಮತ್ತು ಸಂವಿಧಾನ ವಿರೋಧಿ ಮನುವಾದಿಗಳಿಂದ ಸಂವಿಧಾನದ ನಿರಂತರ ದಾಳಿ ನಡೆಸುತ್ತಿರುವ ಕುರಿತು ರಾಜ್ಯದ 20 ಜಿಲ್ಲೆಗಳಿಗೆ ಬೈಕ್ ರ್‍ಯಾಲಿ ನಡೆಸುವ ಮೂಲಕ ಸಂವಿಧಾನ ಸಂರಕ್ಷಣೆಯ ಮಹತ್ವ ಮತ್ತು ಅಗತ್ಯತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಸಂವಿಧಾನ ಮೇಲೆ ನಡೆಯುವ ದಾಳಿಯ ಅರಿವು ಮೂಡಿಸುವುದಾಗಿದೆ ಎಂದು ತಿಳಿಸಿದರು.

ಜಾಥದಲ್ಲಿ ರಾಜೇಂದ್ರ ರಾಜ್ವಾಳ್, ಗೀತಾ ಹೊಸಮನಿ, ಮೈಲಾರಿ ದೊಡ್ಡಮನಿ, ಶರಣು, ಯಮನೂರ್ ರವಿ, ಹೆಮಂತ್, ಕೌಶಲ್ಯ, ಯಮೂನಾ, ದೇವಿಕಾ, ಉಮೇಶ್ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News