ಗುಲಬರ್ಗಾ ಉತ್ತರ ಕ್ಷೇತ್ರ: ಶೇ.50.09 ಮತದಾರರ ಗಣತಿ ನಮೂನೆ ಡಿಜಿಟೈಸ್
Update: 2026-07-22 22:43 IST
ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅಂಗವಾಗಿ 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದಾದ್ಯಂತ ಬುಧವಾರದ ಅಂತ್ಯಕ್ಕೆ 1,67,928 ಜನರ ಗಣತಿ ನಮೂನೆ ಪಡೆದುಕೊಂಡು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಅವಿನಾಶ ಶಿಂಧೆ ತಿಳಿಸಿದ್ದಾರೆ.
ಇನ್ನು ಕ್ಷೇತ್ರದ ಒಟ್ಟು 3,35,254 ಮತದಾರರ ಪೈಕಿ ಇದೂವರೆಗೆ 3,34,735 ಮತದಾರರಿಗೆ (ಶೇ.99.85)ರಷ್ಟು ಗಣತಿ ನಮೂನೆ ವಿತರಣೆ ಮಾಡಲಾಗಿದೆ. ಇನ್ನು ಬಿ.ಎಲ್.ಓ. ಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 433 ಜನ ಮತದಾರರು ಮನೆಯಲ್ಲಿ ಇಲ್ಲದಿರುವುದು(ಗೈರು), 3,200 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 3,215 ಜನ ಮತದಾರರು ನಿಧನ ಹೊಂದಿರುವುದು ಹಾಗೂ 1,878 ಜನ ಮತದಾರರು ಈಗಾಗಲೆ ನೋಂದಣಿಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.