×
Ad

Kalaburagi | ಗುಲ್ಬರ್ಗಾ ವಿವಿ ಕುಲಸಚಿವರಿಂದ ಜೀವ ಬೆದರಿಕೆ ಆರೋಪ: ಕುಲಪತಿಗಳಿಗೆ ಅತಿಥಿ ಉಪನ್ಯಾಸಕನ ದೂರು

Update: 2026-01-18 23:31 IST

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ್ ಲಂಡನಕರ್ ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಡಾ.ರಾಜಕುಮಾರ ದಣ್ಣೂರ ಗಂಭೀರವಾಗಿ ಆರೋಪಿಸಿದ್ದು, ಕುಲಪತಿಗಳಿಗೆ ದೂರು ನೀಡಿದ್ದಾರೆ.

ಕಳೆದ 7 ವರ್ಷಗಳಿಂದ ಪೂರ್ಣಕಾಲಿಕ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ, 2026ರ ಶೈಕ್ಷಣಿಕ ಸಾಲಿನಲ್ಲಿ ನನ್ನ ಕಾರ್ಯಭಾರವನ್ನು ಏಕಾಏಕಿ 12 ಗಂಟೆಗೆ ಇಳಿಸಿ ಅನ್ಯಾಯ ಮಾಡಲಾಗಿದೆ. ಈ ಕುರಿತು ವಿಚಾರಿಸಲು ಹೋದಾಗ ಕುಲಸಚಿವರು ಏಕವಚನದಲ್ಲಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಅವರ ನಡೆ ನನಗೆ ಭೀತಿ ಉಂಟುಮಾಡಿದ್ದು, ರಕ್ಷಣೆ ನೀಡಬೇಕು," ಎಂದು ರಾಜಕುಮಾರ ದಣ್ಣೂರ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಗಳನ್ನು ನಿರಾಕರಿಸಿರುವ ಕುಲಸಚಿವ ಪ್ರೊ. ರಮೇಶ್ ಲಂಡನಕರ್, "ಅತಿಥಿ ಉಪನ್ಯಾಸಕರ ನೇಮಕಾತಿ ಹಾಗೂ ಅಂಕಗಳ ಹಂಚಿಕೆಯಲ್ಲಿ ನಮ್ಮ ಪಾತ್ರವಿರುವುದಿಲ್ಲ. ಡೀನ್ ಮತ್ತು ವಿಷಯ ತಜ್ಞರನ್ನು ಒಳಗೊಂಡ ಸಂದರ್ಶನ ಸಮಿತಿಯು ನೀಡಿದ ಅಂಕಗಳ ಆಧಾರದ ಮೇಲೆ ನಾವು ಸಹಿ ಹಾಕುತ್ತೇವೆ ಅಷ್ಟೇ. ಇದನ್ನು ದಣ್ಣೂರ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದಾಗ, ಅವರು ನನ್ನ ಚೇಂಬರ್‌ನಲ್ಲೇ ಉದ್ಧಟತನ ತೋರಿ, ಏಕವಚನದಲ್ಲಿ ನಿಂದಿಸಿದ್ದಾರೆ," ಎಂದು ಸ್ಪಷ್ಟನೆ ನೀಡಿದ್ದಾರೆ.

ಅವರೇ ಬೆದರಿಕೆ ಹಾಕಿದ್ದರಿಂದ ಪೊಲೀಸರಿಗೆ ಕರೆ ಮಾಡುವೆ ಎಂದು ಹೇಳಿದಾಗ ಅವರು ಕಚೇರಿಯಿಂದ ನಿರ್ಗಮಿಸಿದ್ದಾರೆ ಎಂದು ಕುಲಸಚಿವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News