ಚಿತ್ತಾಪುರ | ದುಶ್ಚಟಗಳ ದಾಸರಾಗದಿರಿ: ಫಕೀರಪ್ಪ ದೊಡ್ಡಮನಿ
Update: 2026-01-18 22:29 IST
ಚಿತ್ತಾಪುರ : ಯುವ ಜನಾಂಗ ಯಾವುದೇ ದುಶ್ಚಟಗಳಿಗೆ ದಾಸರಾಗಬಾರದು ಎಂದು ಜಿಮ್ಸ್ ಆಸ್ಪತ್ರೆಯ ಹಿರಿಯ ನರ್ಸಿಂಗ್ ಅಧಿಕಾರಿ ಫಕೀರಪ್ಪ ದೊಡ್ಡಮನಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಕಿವಿಮಾತು ಹೇಳಿದ್ದಾರೆ.
ತಾಲೂಕಿನ ಹುಳಂಡಗೇರ ಗ್ರಾಮದಲ್ಲಿ ಗುರು ಅಯ್ಯಳಲಿಂಗೇಶ್ವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ನಿಮಿತ್ತ ಹಮಿಕೊಂಡಿದ್ದ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂಬಾಕಿನಲ್ಲಿ ನಿಕೋಟಿನ್ ಅಂಶವಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶ್ವಾಸಕೋಶಕ್ಕೆ ಹಾನಿಯುಂಟಾಗುವ ಕಾರಣದಿಂದ ತಂಬಾಕು ಸೇವನೆ ಮಾಡಬಾರದು ಎಂದು ಹೇಳಿದರು.
ಜೆಸ್ಕಾಂನ ಮಾಜಿ ನಿರ್ದೇಶಕ ಗೋಪಿಕೃಷ್ಣ ಮಾತನಾಡಿದರು. ಗ್ರಾಮದ ಮಕ್ಕಳಿಗೆ ನೋಟ್ ಬುಕ್, ಪೆನ್ ನೀಡಿ ಸನ್ಮಾನಿಸಿದರು. ಮಲ್ಲೇಶಿ ಬೇನಳ್ಳಿ, ಇತರರಿದ್ದರು. ನೃತ್ಯ, ಕಿರುನಾಟಕ ಇತರ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.