ಕಲಬುರಗಿ | ಜ.20ರಂದು ಪ್ರಾದೇಶಿಕ ಭವಿಷ್ಯನಿಧಿ ಕಚೇರಿಗೆ ಮುತ್ತಿಗೆ : ರಾಹುಲ್ ಉಪಾರೆ
Update: 2026-01-18 22:20 IST
ಕಲಬುರಗಿ : ಕಾರ್ಮಿಕರ ಪಿಎಫ್ ಹಣ ಭರಿಸದಿರುವ ಎಜೆನ್ಸಿಗೆ ಸೂಚನೆ ನೀಡಿದ್ದರೂ ಕ್ರಮ ಜರುಗಿಸದಿರುವ ಪ್ರಾದೇಶಿಕ ಆಯುಕ್ತರ ಭವಿಷ್ಯನಿಧಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಜೈ ಭೀಮ ಸೇನೆಯ ಜಿಲ್ಲಾಧ್ಯಕ್ಷ ರಾಹುಲ್ ಉಪಾರೆ ತಿಳಿಸಿದ್ದಾರೆ.
ಈ ಕುರಿತು ಈಗಾಗಲೇ ಪ್ರಾದೇಶಿಕ ಆಯುಕ್ತರ ಭವಿಷ್ಯನಿಧಿಯ ಕಲಬುರಗಿ ಕಚೇರಿಗೆ ಹಲವು ಬಾರಿ ಮನವಿ ನೀಡಲಾಗಿದ್ದರೂ ಅರ್ಜಿಯ ಕುರಿತಾಗಿ ಯಾವುದೇ ಕ್ರಮವಾಗದ ಪ್ರಯುಕ್ತ ಜ.20ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದರ್ಶಿ ಹಣಮಂತ ನಾಟಿಕಾರ, ರೇವಣ್ಣ ಭಾವಿಮನಿ, ಎಮ್.ಡಿ. ಸದ್ದಾಮ್, ಸಿದ್ದಾರ್ಥ ದಿಗಸಂಗಿಕರ, ದತ್ತು ಬುಕ್ಕನ, ಅಮಿತ ಮಾಲೆ, ಅಮಿತ ರೆಡ್ಡಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.