ಕಲಬುರಗಿ | ಜ.19ರಂದು ಬಿಜೆಪಿ ಪ್ರತಿಭಟನೆ : ಮಲ್ಲಿಕಾರ್ಜುನ
ಕಲಬುರಗಿ : ರಾಜ್ಯ ಸರಕಾರದ ವೈಫಲ್ಯ ಹಾಗೂ ಎಸ್‌ಸಿಪಿ., ಟಿಎಸ್‌ಪಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ವಿರುದ್ಧ ಜ.19ರಂದು ಬಿಜೆಪಿ ಎಸ್.ಸಿ. ಮೋರ್ಚಾದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜೀನಕೇರಿ ತಿಳಿಸಿದ್ದಾರೆ.
ನಗರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು.
ಸಿಎಂ ಅವರು ಅಹಿಂದ ಪರ ಇದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಒಂದು ಒಳ್ಳೆಯ ಯೋಜನೆ ನೀಡಿಲ್ಲ. ಇರುವ ಯೋಜನೆಗಳನ್ನು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ದಲಿತಪರ ಇಲ್ಲ. ದಲಿತಪರ ಎಂದು ವೋಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಮುಖಂಡ ರಾಜು ವಾಡೇಕರ್, ರಮೇಶ್ ವಾಡೇಕರ್ ಸೇರಿ ಅನೇಕರು ಮಾತನಾಡಿದರು.
ಈ ಸುದ್ದಿಗೋಷ್ಠಿಯಲ್ಲಿ ರಾಜು ಕಟ್ಟಿಮನಿ, ಮಲ್ಲಿಕಾರ್ಜುನ್ ಸರಡಗಿ, ಸಚಿನ ಕಟ್ಟಿಮನಿ, ಪ್ರದೀಪ ಬಾಚನಾಳ, ಶ್ರೀಮಂತ ಭಂಡಾರಿ, ಭಂಡೇಶ್ ಆರ್., ರಾಜೇಶ್ ಶಿವನೂರ್, ಪ್ರಧ್ವಿರಾಜ್ ರಾಂಪೂರ್, ದತ್ತು ಹಯ್ಯಾಳಕರ್, ಮರಲಿಂಗ ಇತರರು ಉಪಸ್ಥಿತರಿದ್ದರು.