ಕಲಬುರಗಿ | ಫ್ಲಿಪ್‌ಕಾರ್ಟ್ ಕಚೇರಿಯಿಂದ 10 ಮೊಬೈಲ್ ಫೋನ್ ಕಳವು : ಪ್ರಕರಣ ದಾಖಲು
Update: 2025-09-03 18:38 IST
ಕಲಬುರಗಿ: ನಗರದ ಡಬರಾಬಾದ್ ಕ್ರಾಸ್‌ನಲ್ಲಿರುವ ಫ್ಲಿಪ್‌ಕಾರ್ಟ್ ಕಚೇರಿ ಬಳಿ 1.16 ಲಕ್ಷ ರೂ. ಮೌಲ್ಯದ ವಿವಿಧ ಬ್ರಾಂಡ್‌ಗಳ ಸುಮಾರು 10 ಮೊಬೈಲ್ ಫೋನ್‌ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
'ಆ.27 ರಿಂದ 31 ರ ನಡುವೆ ಪಾರ್ಸೆಲ್‌ಗಳನ್ನು ನಿರ್ವಹಿಸುತ್ತಿದ್ದಾಗ ವಿತರಣಾ ವಾಹನದಿಂದ ಮೊಬೈಲ್‌ಗಳನ್ನು ಕದ್ದಿದ್ದಾರೆ' ಎಂದು ಫ್ಲಿಪ್‌ಕಾರ್ಟ್ ಕಚೇರಿ ಕೆಲಸ ಮಾಡುತ್ತಿದ್ದ ತಂಡದ ನಾಯಕ ಸುನೀಲ್ ನಾಗಡೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸುನೀಲ್ ಅವರ ದೂರಿನ ಮೇರೆಗೆ ಇಲ್ಲಿನ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.