×
Ad

ಕಲಬುರಗಿ | ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷಾ ಕಾರ್ಯಕ್ಕಾಗಿ ನೋಡಲ್ ಅಧಿಕಾರಿಗಳ ನೇಮಕ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್

Update: 2025-05-06 20:35 IST

ಬಿ.ಫೌಝಿಯಾ ತರನ್ನುಮ್ 

ಕಲಬುರಗಿ : ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಕಾರ್ಯಕ್ಕಾಗಿ ಕೆಳಕಂಡಂತೆ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ಕಲಬುರಗಿ (ಗ್ರಾ) ವಿಧಾನಸಭಾ ಕ್ಷೇತ್ರ : ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯಾ ಎಮ್.ಆಲದಕಟ್ಟಿ (ಮೊಬೈಲ್ ಸಂಖ್ಯೆ 7411186238).

ಸೇಡಂ ವಿಧಾನಸಭಾ ಕ್ಷೇತ್ರ : ಸೇಡಂ ಉಪವಿಭಾಗದ ಸಹಾಯಕ ಆಯುಕ್ತ ಪ್ರಭುರೆಡ್ಡಿ (ಮೊಬೈಲ್ ಸಂಖ್ಯೆ 9986554416).

ಆಳಂದ ವಿಧಾನಸಭಾ ಕ್ಷೇತ್ರ : ಕಲಬುರಗಿ ಕೆ.ಎನ್.ಎನ್.ಎಲ್. (SLAO) ಎಸ್.ಎಲ್.ಎ.ಓ.ರಾದ ಪಾರ್ವತಿ (ಮೊಬೈಲ್ ಸಂಖ್ಯೆ 9663690275).

ಚಿತ್ತಾಪೂರ ವಿಧಾನಸಭಾ ಕ್ಷೇತ್ರ: ಕಲಬುರಗಿ ಎನ್.ಎಚ್.ಎ.ಐ. (SLAO) ಎಸ್.ಎಲ್.ಎ.ಓ. ರಾದ ರಾಮಚಂದ್ರ ಗಡದೆ (ಮೊಬೈಲ್ ಸಂಖ್ಯೆ: 9743334596).

ಚಿಂಚೋಳಿ ವಿಧಾನಸಭಾ ಕ್ಷೇತ್ರ : ಕಲಬುರಗಿ ಕೆ.ಐ.ಎ.ಡಿ.ಬಿ. (SLAO) ಎಸ್.ಎಲ್.ಎ.ಓ. ರಾದ ಮಲ್ಲೇಶ ತಂಗಾ (ಮೊಬೈಲ್ ಸಂಖ್ಯೆ 9448650889).

ಕಲಬುರಗಿ (ಉ) ವಿಧಾನಸಭಾ ಕ್ಷೇತ್ರ : ಕಲಬುರಗಿ ಕೆ.ಕೆ.ಆರ್.ಡಿ.ಬಿ. ಅಧೀನ ಕಾರ್ಯದರ್ಶಿ ಪ್ರಕಾಶ ಕುದರಿ (ಮೊಬೈಲ್ ಸಂಖ್ಯೆ: 9901991334).

ಜೇವರ್ಗಿ ವಿಧಾನಸಭಾ ಕ್ಷೇತ್ರ : ಕಲಬುರಗಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಂದಾರ್ (ಮೊಬೈಲ್ ಸಂಖ್ಯೆ 9448999235).

ಅಫಜಲಪೂರ ವಿಧಾನಸಭಾ ಕ್ಷೇತ್ರ: ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೀದ ಕಾರಂಗಿ (ಮೊಬೈಲ್ ಸಂಖ್ಯೆ: 9449161217).

ಕಲಬುರಗಿ (ದ) ವಿಧಾನಸಭಾ ಕ್ಷೇತ್ರ : ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಭು ದೊರೆ (ಮೊಬೈಲ್ ಸಂಖ್ಯೆ 9901444631).

ಮೂರು ಹಂತಗಳಲ್ಲಿ ಸಮೀಕ್ಷೆ :

ಈ ಸಮೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದ್ದು, 1ನೇ ಹಂತದ ಸಮೀಕ್ಷೆಯು ಮೇ 5 ರಿಂದ 17 ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವುದು. 2ನೇ ಹಂತದ ಸಮೀಕ್ಷೆಯು ಮೇ 19 ರಿಂದ 21 ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವುದು. 3ನೇ ಹಂತದ ಸಮೀಕ್ಷೆಯು ಮೇ 19 ರಿಂದ 23 ರವರೆಗೆ ಸ್ವಯಂ ಘೋಷಣೆ (ಆನ್‍ಲೈನ್ ಮೂಲಕ) ಕೈಗೊಳ್ಳಲಾಗುತ್ತಿದೆ.

ಅದೇ ರೀತಿ ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಹಾಗೂ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮನ್ವಯ ಸಮಿತಿ ರಚಿಸಲಾಗಿದೆ. ಸಮೀಕ್ಷೆಯ ಕುರಿತು ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಮಾಸ್ಟರ್ ಟ್ರೈನರ್ ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ಗೌರವಾನ್ವಿತ ನ್ಯಾಯಮೂರ್ತಿಗಳಾದ ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಲಾಗಿದೆ. ಸದರಿ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಕ್ಷೆಯನ್ನು ನಡೆಸಲು ತಿರ್ಮಾನಿಸಿ, ರಾಜ್ಯ ಮಟ್ಟದ, ಬಿ.ಬಿ.ಎಂ.ಪಿ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಸಮನ್ವಯ ಸಮಿತಿಗಳನ್ನು ಸರಕಾರ ರಚಿಸಿ ಆದೇಶಿಸಿದೆ. ಸದರಿ ಸಮೀಕ್ಷೆಯ ಉದ್ದೇಶವು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ವಾಸ್ತವಿಕ ಮಾಹಿತಿ ಪಡೆದುಕೊಳ್ಳುವ ಈ ಸಮೀಕ್ಷೆಯ ಉದ್ದೇಶವಾಗಿದೆ.

ಗಣತಿದಾರರು ನಡೆಸುವ ಸಮೀಕ್ಷೆಯ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು/ ಪದಾಧಿಕಾರಿಗಳು, ಸಾರ್ವಜನಿಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಗಣತಿದಾರರಿಗೆ ಸಹಕರಿಸಿ ಈ ಸಮೀಕ್ಷೆ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News