ಕಲಬುರಗಿ | ಡಿ.28, 29, 30 ರಂದು ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ
ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಸಮ್ಮೇಳನದ ಸರ್ವಾಧ್ಯಕ್ಷತೆ
ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ವತಿಯಿಂದ ಡಿ.28, 29 ಮತ್ತು 30ರಂದು ಮೂರು ದಿನಗಳ ಕಾಲ ಶರಣ ಸಾಹಿತಿ, ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಸಮ್ಮೇಳನದ ಸರ್ವಾಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನವನ್ನು ಗಿರಿಗಳ ನಾಡು ಯಾದಗಿರಿಯ ಜಿಲ್ಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದ್ದಾರೆ.
ನಗರದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಜಿಲ್ಲಾಡಳಿತ ಯಾದಗಿರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಇಸ್ರೋ, ಭಾರತ ಸರ್ಕಾರ ಬೆಂಗಳೂರು ಜವಾಹರಲಾಲ್ ನೆಹರೂ ತಾರಾಲಯ, ಭಾರತ ವಾಯುಪಡೆ, ಕರ್ನಾಟಕ ವಿಶ್ವೇಶ್ವರಯ್ಯ ಕೈಗಾರಿಕೆ ಹಾಗೂ ತಾಂತ್ರಿಕ ಮ್ಯೂಸಿಯಂ, ಮೊಬೈಲ್ ಪ್ಲಾನಿಟೋರಿಯಂ, ಕೆ ಸ್ಟೆಪ್ಸ್, ನ್ಯಾಷನಲ್‌ಎರೋನಾಟಿಕ್ಸ್ ಲ್ಯಾಬೋರೋಟರಿ, ಡಿ.ಆರ್.ಡಿ.ಓ, ಬೆಂಗಳೂರು ಮಾನವ ಬಂಧುತ್ವ ವೇದಿಕೆ, ಕರ್ನಾಟಕರಾಜ್ಯ, ಯಾದಗಿರಿ ಜಿಲ್ಲಾ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಪ್ರತಿ ವರ್ಷ ಡಿಸೆಂಬರ್ ನಲ್ಲಿ ಬರುವ ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿ ಸಾಧಕರನ್ನು ಅಭಿನಂದಿಸಲಾಗುತ್ತಿದೆ. ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಇಸ್ರೊ, ಡಿ.ಆರ್.ಡಿ.ಓ, ನೆಹರೂ ತಾರಾಲಯ ಹಾಗೂ ವಿವಿಧ ವಿಜ್ಞಾನ ಸಂಸ್ಥೆಗಳು ವಿಜ್ಞಾನ ವಸ್ತು ಪ್ರದರ್ಶನ, ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿಗಳು, ಸಾಂಸ್ಕೃತಿಕ ವೈವಿಧ್ಯ, ನಾಟಕ ಪ್ರದರ್ಶನ ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಸಾರ್ವಜನಿಕರು ಭಾಗವಹಿಸುವ ಈ ಸಮ್ಮೇಳನದಲ್ಲಿ ಅನೇಕ ಸಚಿವರು, ಶಾಸಕರು, ವಿಜ್ಞಾನಿಗಳು ಅನೇಕ ಗಣ್ಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಈ ಬಾರಿ ಶರಣ ಸಾಹಿತಿ ಚಿಂತಕ ಹಿರಿಯ ಪತ್ರಕರ್ತ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ವೈಜ್ಞಾನಿಕ ಸಮ್ಮೇಳನಕ್ಕೆ ರಾಜ್ಯದ ಉದ್ದಗಲಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಅನೇಕ ಸಾಧಕರಿಗೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಡಿ. 28ರ ಭಾನುವಾರ ಮಧ್ಯಾಹ್ನ 2.30ಕ್ಕೆ ಯಾದಗಿರಿಯ ಮೈಲಾರ ಅಗಸಿ ಬಾಗಿಲಿನಿಂದ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಆರಂಭವಾಗಲಿದ್ದು, ಶಾಂತವೀರಗುರುಮುರುಘರಾಜೇಂದ್ರ ಸ್ವಾಮಿಜಿಗಳು, ಖಾಸಾಮಠ ಗುರುಮಠಕಲ್, ಯಾದಗಿರಿ ಸಿದ್ಧಬಸವ ಕಬೀರಾನಂದ ಸ್ವಾಮಿಗಳು, ಚಿಗರಹಳ್ಳಿ ಇವರು ಸಾನ್ನಿಧ್ಯ ವಹಿಸಲಿದ್ದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಇವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ತುನ್ನೂರು, ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು, ಸುರುಪುರ ಕ್ಷೇತ್ರದ ಶಾಸಕ ರಾಜವೇಣುಗೋಪಾಲ್ ನಾಯಕ್ ಹಾಗೂ ಅನೇಕ ಗಣ್ಯರು ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ.
ಡಿ.29 ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಯಾದಗಿರಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಾಡಿಯ ರಾಷ್ಟ್ರಧ್ವಜ ಹಾಗೂ ಪರಿಷತ್ತಿನ ಧ್ವಜವನ್ನು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ನೆರವೇರಿಸುವರು ಎಂದು ಮಾಹಿತಿ ನೀಡಿದರು.
ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿಜಗುಣಾನಂದ ಸ್ವಾಮೀಜಿ, ನಿಷ್ಕಲ ಮಂಟಪ ಬೈಲೂರು, ಶಾಂತವೀರಗುರುಮುರುಘರಾಜೇಂದ್ರ ಸ್ವಾಮಿಜಿಗಳು, ಖಾಸಾಮಠ ಗುರುಮಠಕಲ್, ಯಾದಗಿರಿ ಸಿದ್ಧಬಸವ ಕಬೀರಾನಂದ ಸ್ವಾಮಿಗಳು, ಚಿಗರಹಳ್ಳಿ ಇವರು ಸಾನ್ನಿಧ್ಯ ವಹಿಸಲಿದ್ದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಬೃಹತ್ ಉದ್ಯಮ ಇಲಾಖೆ ಸಚಿವರಾದ ಶರಣ ಬಸಪ್ಪ ದರ್ಶನಾಪುರ ಸಮ್ಮೇಳನವನ್ನು ಉದ್ಘಾಟಿಸುವರು, ಡಾ.ಹುಲಿಕಲ್ ನಟರಾಜ್ ಅವರ ಆರು ಬೃಹತ್ ಸಾಹಿತ್ಯ ಸಂಪುಟ ಕೃತಿಗಳನ್ನು ಲೊಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಲೋಕಾರ್ಪಣೆ ಮಾಡುವರು. ಹೆಸರಾಂತ ವಿಜ್ಞಾನಿ ಡಾ.ಎ.ಎಸ್.ಕಿರಣ್‌ಕುಮಾರ್ ವಿಜ್ಞಾನಗಿರಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್.ಬೋಸರಾಜ್ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸುವರು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ವಿಜ್ಞಾನ ಪ್ರಮಾಣ ವಚನ ಬೋದಿಸುವರು, ಗುರುಮಠಕಲ್ ಶಾಸಕ ಶರಣಗೌಡ ಪಾಟೀಲ್ ಕಂದಕೂರು 2026 ರ ಕ್ಯಾಲೆಂಡರ್ ಬಿಡುಗಡೆ ಮಾಡಲಿರುವರು, ಸುರಪುರ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ್ 2026 ರ ದಿನಚರಿಯನ್ನು ಬಿಡುಗಡೆ ಮಾಡಲಿದ್ದು, ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಕುಮಾರ್ ನಾಯಕ್ 2025ರ ಜೀವಮಾನ ಸಾಧನಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡುವರು, ಕಲಬುರಗಿ ಲೋಕಸಭಾ ಸಂಸದರಾದ ರಾಧಾಕೃಷ್ಣ ದೊಡ್ಡಮನಿ ವಿಶಿಷ್ಠ ಸೇವಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಈ ಸಂದರ್ಭದಲ್ಲಿ ಅನೇಖ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.
ಜೀವಮಾನ ಸಾಧಾನ ಪ್ರಶಸ್ತಿ ಪುರಸ್ಕೃತರು :
ಅಂಕೇಗೌಡ ಪುಸ್ತಕಮನೆ ಪಾಂಡವಪುರ, ರಾಜಣ್ಣನವರ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಡಾ.ನಂದೀಶ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ಎಸ್.ಸಿ.ಪಾಟೀಲ್.
2025- ವಿಶಿಷ್ಠ ಸೇವಾ ಪ್ರಶಸ್ತಿ ಪುರಸ್ಕೃತರು :
ದಾನಿ ಬಾಬುರಾವ್ ಸಂಘಟನೆ, ವಿ.ಟಿ.ಸ್ವಾಮಿ ಸಾಗರ ಸಾಹಿತ್ಯ, ಸಿ.ಶಿವಲಿಂಗಯ್ಯ ಸಂಘಟನೆ, ಪುಷ್ಪಲತಾ ಪುಟ್ಟಸ್ವಾಮಿ ಸಂಘಟನೆ, ಮಹಾದೇವ್ ಎನ್ ಸಂಘಟನೆ, ಗೋಪಾಲ ಕೃಷ್ಣ ವೈಜ್ಞಾನಿಕತೆ, ಶಾಂತಗೌಡ ಹೆಚ್.ಬಿ ಸಂಘಟನೆ, ಆರ್.ಹೆಚ್.ಎಂ.ಚನ್ನಬಸವಸ್ವಾಮಿ ಶೈಕ್ಷಣಿಕ ಕ್ಷೇತ್ರ.
ಮಧ್ಯಾಹ್ನ- 2ಕ್ಕೆ ಸಂವಿಧಾನ ಸಂವೇದನಾ ಗೋಷ್ಠಿಯಲ್ಲಿ ಖ್ಯಾತ ವಕೀಲರಾದ ಸುಧೀರ್ ಮುರೊಳ್ಳಿಯವರು ವಿಷಯ ಮಂಡಿಸಲಿದ್ದಾರೆ. ಡಾ.ವಿಜಯ್ ಪ್ರಕಾಶ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅನೇಕ ಗಣ್ಯರು ಈ ಗೋಷ್ಠಿಯಲ್ಲಿ ಉಪಸ್ಥಿತರಿರುವರು.
ಸಂಜೆ-4ಕ್ಕೆ ನಡೆಯುವ ಗೋಷ್ಠಿ ಎರಡಲ್ಲಿ ಎಐ ಏನು ಮಾಯವೋ ವಿಷಯ ಕುರಿತು ಡಿ.ಎಂ.ಸುರೇಶ್ ಹಾಗೂ ಮೌಢ್ಯತೆಯ ಮಾರಿಯನು ಹೊರದೂಡಲು ಬನ್ನಿ ವಿಷಯ ಕುರಿತು ಪ್ರೊ.ಶಿವಗಂಗಾ ರುಮ್ಮಾ ಮಾತನಾಡಲಿದ್ದು ರಾಜ್ಯ ರೈತ ಸಂಘದ ನಾಗರತ್ನ ಯಕ್ಷಿಂತಿ ಗೋಷ್ಠಿಯ ಅಧ್ಯಕ್ಷತೆಯವನ್ನು ವಹಿಸಲಿದ್ದಾರೆ. ಈ ಗೋಷ್ಠಿಯಲ್ಲಿ ಅನೇಕ ಗಣ್ಯರು ಉಪಸ್ಥಿತರಿರುವರು.
ಸಂಜೆ 6 ಕ್ಕೆ ಖ್ಯಾತ ವೈದ್ಯರಾದ ಡಾ.ಆಂಜನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರಾದ ವಿಶ್ವಾರಾಧ್ಯ ಸತ್ಯಂಪೇಟೆ ಇವರೊಂದಿಗೆ ವಿವಿಧ ಗಣ್ಯರ ಸಮ್ಮುಖದಲ್ಲಿ ಸಂವಾದವನ್ನು ಏರ್ಪಡಿಸಿದೆ.
ರಾತ್ರಿ 7ಕ್ಕೆ ಹುಚ್ಚು ಮನದ ಕುದುರೆಯನೇರಿ ಪವಾಡಗಳ ಅನಾವರಣ ಪ್ರಾತ್ಯಕ್ಷಕೆಯನ್ನು ಆಯೋಜಿಸಿದ್ದು, ತಿಂತಣಿ ಕನಕಗುರು ಪೀಠದ ಸಿದ್ಧರಾಮಾನಂದ ಪುರಿ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಖ್ಯಾತ ವೈದ್ಯರಾದ ಡಾ.ಜಿ.ಎಸ್.ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಈ ಸಂದರ್ಭದಲ್ಲಿ ಅನೇಕ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ರಾತ್ರಿ 8ಕ್ಕೆ ಕಲಬುರಗಿ ರಂಗಾಯಣದಿಂದ ಕಾಲಚಕ್ರ ನಾಟಕ ಪ್ರದರ್ಶನವಾಗಲಿದೆ.
ಡಿ.3ರಂದು 3ನೇ ದಿನ ಸಮ್ಮೇಳನ :
ಬೆಳಗ್ಗೆ 9.30ಕ್ಕೆ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಅವರ ಅಧ್ಯಕ್ಷತೆಯಲ್ಲಿ ಪರಿಷತ್ತಿನ ಮಹಾಧಿವೇಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿಶ್ವದಾಖಲೆ ಮಾಡಿದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಹೆಚ್.ವಿ.ಚಿಕ್ಕಹನುಮಂತೇಗೌಡ, ದಾಕ್ಷಾಯಣಿ ಅಶೋಕ ಮಂಡಿ, ರಾಣಿ ಹಾಸನ ಇವರನ್ನು ಗುರುಮಠಕಲ್ ಶಾಖಾ ಮಠದ ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ ಅಭಿನಂದಿಸಲಿದ್ದಾರೆ.
ಬೆಳಗ್ಗೆ-10.30ಕ್ಕೆ ನಡೆಯುವ 4ನೇ ಗೋಷ್ಠಿಯಲ್ಲಿ ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ವಿಷಯ ಕುರಿತು ಡಾ.ಜಯದೇವಿ ಗಾಯಕವಾಡ, ಏನುಮಾಡಿ ಏನು ಬಂತಣ್ಣ ಓ ರೈತಣ್ಣ ವಿಷಯ ಕುರಿತು ರೈತ ಮುಖಂಡರಾದ ಜೆ.ಎಂ.ವೀರಸಂಗಯ್ಯ ಮಾತನಾಡಲಿದ್ದಾರೆ. ಖ್ಯಾತ ವಿಜ್ಞಾನಿ ಡಾ.ಎ.ಎಸ್.ಕಿರಣ್‌ಕುಮಾರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿರುವರು.
ಮಧ್ಯಾಹ್ನ 12.30ಕ್ಕೆ ಗೋಷ್ಠಿ 5 ರಲ್ಲಿ ಎಲ್ಲಾ ಮತದ ಹೊಟ್ಟ ತೂರಿ ಕಾರ್ಯಕ್ರಮದಲ್ಲಿ ಮೈಸೂರು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಆಳಂದ ಕೋರಣೇಶ್ವರ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮಿಜಿ ಸಾನ್ನಿಧ್ಯ ವಹಿಸಲಿದ್ದು, ಐಟಿಬಿಟಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಆಶಯ ಮಾತುಗಳನ್ನಾಡುವರು. ಈ ಗೋಷ್ಠಿಯಲ್ಲಿ ವಿವಿಧ ಧರ್ಮಗಳ ಗಣ್ಯರು ಭಾಗವಹಿಸಲಿದ್ದಾರೆ. ರವಿಕುಮಾರ್ ಗೌಡ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ರಾಜ್ಯ ಮಟ್ಟದ ಹೆಚ್.ಎನ್.ಪ್ರಶಸ್ತಿ ಪ್ರಧಾನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಚಿಗರಹಳ್ಳಿ ಮರುಳ ಶಂಕರ ಮಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ್ ಲಾಡ್ ಪ್ರಶಸ್ತಿ ಪ್ರದಾನ ಮಾಡುವರು.
ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಲಿದ್ದು, ಅನೇಕ ಗಣ್ಯರು ಉಪಸ್ಥಿತರಿರುವರು.
ರಾಜ್ಯ ಮಟ್ಟದ ಹೆಚ್.ಎನ್.ಪ್ರಶಸ್ತಿ ಪುರಸ್ಕೃತರು :
ಎಂ.ಗೋಪಿನಾಥ ಬೆಂಗಳೂರು ನಗರ, ಡಿ.ಪಿ.ಆಂಜನೆಯ ಬೆಂಗಳೂರು ಗ್ರಾಮಾಂತರ, ಡಾ.ಅಂಕನಹಳ್ಳಿ ಪಾರ್ಥ ರಾಮನಗರ, ಮಲ್ಲಿಕಾರ್ಜು ದುಂಡ ತುಮಕೂರು, ಡಾ.ಶ್ರೀನಿವಾಸ ಮೂರ್ತಿ ಎನ್, ಚಿಕ್ಕಬಳ್ಳಾಪುರ, ಮಂಜುನಾಥ ವಿ.ಕೋಲಾರ, ಎನ್,ಕೆ.ಕೊಟ್ರೇಶ್ ದಾವಣೆಗೆರೆ, ಡಾ.ಮಹೇಶ್ ಕೆ.ನ್.ಚಿತ್ರದುರ್ಗ, ವಿರೂಪಾಕ್ಷಪ್ಪ ಎಸ್.ಡಿ ಶಿವಮೊಗ್ಗ, ಎಚ್.ಎಂ.ಪೃಥ್ವಿರಾಜ್ ಚಾಮರಾಜ ನಗರ, ಡಾ.ಮಹೇಶ್ ದಳಪತಿ ಮೈಸೂರು, ಅಫ್ತಾಬ್ ಎಂ.ಬಿ ಕೊಡಗು, ನಂಜುರಾಜು ಸಿ.ಎಲ್ ಮಂಡ್ಯ, ಕೆ.ವಿ.ಯೋಗೀಶ್ ಹಾಸನ, ಡಾ.ವೆಂಕಟರಮಣಪ್ಪ ದಕ್ಷಿಣ ಕನ್ನಡ, ಕೆ.ಎಸ್.ರವೀಂದ್ರ ಕುಕ್ಕೋಡಿಗೆ ಚಿಕ್ಕಮಗಳೂರು, ಜಗನ್ನಾಥ ಆಲಂಪಲ್ಲಿ ಕೊಪ್ಪಳ, ಸಿ.ಎಂ.ಗಂಗಾಧರಯ್ಯ ಬಳ್ಳಾರಿ, ಮಹಾಂತೇಶ್ ಮಸ್ಕಿ ರಾಯಚೂರು, ಅಮೃತಾರಾವ್ ಪಾಟೀಲ್ ಕಲಬುರಗಿ, ಸುರೇಶ್ ಚನ್ನಶೇಟ್ಟಿ ಬೀದರ್, ಡಾ.ಪರವೇಜ್ ಕಾಡ್ಲೂರ, ವೆಂಕಪ್ಪ ದು. ಅಲೆಮನಿ ಯಾದಗಿರಿ, ಸದ್ಗುರು ಭಟ್ ಶಿರಸಿ, ಮಹೇಶ್ ನೀಲಕಂಠ ಚನ್ನಂಗಿ ಬೆಳಗಾವಿ, ಸುಭಾಷ್ ಸಜ್ಜನ್ ವಿಜಯಪುರ, ಡಾ.ಶಿವಕುಮಾರ್ ಸ್ವಾಮೀಜಿ ಬಾಗಲಕೋಟೆ, ಮಂಜುನಾಥ ಮಳಗಿ, ಬಸವರಾಜ ಮಲ್ಲೇಶಪ್ಪ ತಡಹಾಳ ಹುಬ್ಬಳ್ಳಿ, ರುದ್ರಪ್ಪ ಎಲ್. ಹುಡೇದ ಹಾವೇರಿ, ಎಂ.ವೆಂಕಟರಾಮು ಮಧುಗಿರಿ, ಡಾ.ಬಸಪ್ಪ ಮಲ್ಲಪ್ಪ ಹೊಸಪೇಟಿ ಚಿಕ್ಕೋಡಿ, ಎಸ್.ಚಂದ್ರಶೇಖರ್ ಬೆಂಗಳೂರು ದಕ್ಷಿಣ, ಸೋಮಪ್ಪ ಬಿ.ನೀಲೋಗಲ್ ವಿಜಯನಗರ, ಪಂಡಿತ್ ಎಸ್ ಮುಂಜಿ ಧಾರವಾಡ, ಸಿ.ರಾಜಣ್ಣ ಬೆಂಗಳೂರು ಉತ್ತರ, ಡಾ.ಡಿ.ಶಿವಸ್ವಾಮಿ ಬೆಂಗಳೂರು, ಶ್ರೀಕಾಂತ್ ಸುಬ್ರಾಯ್ ನಾಯ್ಕ್ ಉತ್ತರ ಕನ್ನಡ ಜಿಲ್ಲೆ, ಡಾ.ಎಂ.ಎಸ್. ದುರ್ಗಾಪ್ರವೀಣ್ ಆಂಧ್ರಪ್ರದೇಶ.
ರಾಜ್ಯ ಮಟ್ಟದ ಚೈತನ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ :
ಕಲಬುರಗಿ ಶರಣಬಸವೇಶ್ವರ ಸಂಸ್ಥಾನ ಮಠದ ಡಾ.ದಾಕ್ಷಾಯಿಣಿ ಎಸ್.ಅಪ್ಪ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ವೈದ್ಯಕೀಯ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ ಆಶಯ ನುಡಿಗಳನ್ನಾಡುವರು. ಶಾಸಕರಾದ ಅಜಯ್ ಸಿಂಗ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಅನೇಕ ಗಣ್ಯ ಅತಿಥಿಗಳು ಉಪಸ್ತಿತರಿರುವರು.
ರಾಜ್ಯ ಮಟ್ಟದ ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತರು :
ಡಾ.ದಾಕ್ಷಾಯಿಣಿ ಎಸ್.ಅಪ್ಪ ಕಲಬುರಗಿ, ಪಾರ್ವತಿ ಕರೆಡ್ಡಿ ಬೆಂಗಳೂರು ನಗರ, ಎಲ್.ಎನ್.ವಸುಂಧರಾ ದೇವಿ ಬೆಂಗಳೂರು ಗ್ರಾಮಾಂತರ, ಶೈಲಾ ಶ್ರೀನಿವಾಸ್ ರಾಮನಗರ, ಶ್ರೀ ಲಕ್ಷ್ಮೀ ಆರ್ ತುಮಕೂರು, ಅಂಭಿಕಾ ಧೊಂಡಿ ಕೋಲಾರ, ಡಾ.ಆತಿಯಾ ಕೌಸರ್ ದಾವಣಗೆರೆ, ಪೃಥ್ವಿರಾಣಿ ಕೆ.ಎಂ.ಚಿತ್ರದುರ್ಗ, ಪವಿತ್ರ ಎ.ವಿ ಶಿವಮೊಗ್ಗ, ಕವಿತಾ ವಿ.ಎಸ್. ಚಾಮರಾಜನಗರ, ಸಿ.ಕಲ್ಪನ ಮೈಸೂರು, ಕೆ.ಪಿ.ಚಂದ್ರಕಲಾ ಕೊಡಗು, ಜಿ.ಉಷಾರಾಣಿ ಮಂಡ್ಯ, ನಿಚಿತಾ ಕುಮಾರಿ ಹಾಸನ, ಶಾರದಾ ದಿನೇಶ್ ಗೌಡ ದಕ್ಷಿಣ ಕನ್ನಡ, ಹೆಚ್.ಡಿ.ಮಾಲತಿ ಚಿಕ್ಕಮಗಳೂರು, ಡಾ.ಮುಮ್ತಾಜ್ ಬೇಗಂ ಕೊಪ್ಪಳ, ಈರಮ್ಮ ಬಳ್ಳಾರಿ, ರತ್ನ ರಾಯಚೂರು, ಡಾ.ಉಮಾ ದೇಶಮುಖ ಬೀದರ್, ಅನಿತಾ ಹಿರೇಮಠ ಯಾದಗಿರಿ, ಪ್ರಜ್ಞಾ ಹೆಗಡೆ ಶಿರಸಿ, ಪ್ರೇಮಕ್ಕ ಅಂಗಡಿ, ಬೆಳಗಾವಿ, ಸುಮಾ ಚೌಧರಿ ವಿಜಯಪುರ, ಲಲಿತಾ ಕೆ ಹೊಸಪ್ಯಾಟಿ ಬಾಗಲಕೋಟೆ, ನಿರ್ಮಲಾ ಗಂಗಾಧರ ಅರಳಿ ಗದಗ, ಉಷಾ ಕೆ.ಜಿ.ಆರ್ ಹುಬ್ಬಳ್ಳಿ, ನೇಹಾ ಗುಡ್ಡಪ್ಪ ಓಂಕಾರಣ್ಣ ಹಾವೇರಿ, ಜಿ.ಎಂ.ದೀಪ ಮಹೇಶ್ ಮಧುಗಿರಿ, ವಿಜಯಾ ಕೆ.ಹಿರೇಮಠ ಚಿಕ್ಕೋಡಿ, ನಂದಾ ಅಶೋಕ್ ಪೂಜಾರ್ ಬೆಂಗಳೂರು ದಕ್ಷಿಣ, ಶ್ರೀಲತಾ ಎಲ್.ಎಂ ವಿಜಯನಗರ, ನಿರ್ಮಲಾ ಮಲ್ಲಪ್ಪ ಖನ್ನಿನಾಯ್ಕರ್ ಧಾರವಾಡ, ಚರಿತ ಕೊಂಕಲ್ ಬೆಂಗಳೂರು, ಮಧಮತಿ ಹೆಚ್ ಸಿಂಗೆ ಯಾದಗಿರಿ, ಗೀತಾ ಬೆಂಗಳೂರು.
ಸಂಜೆ 6ಕ್ಕೆ ಸಮಾರೋಪ ಸಮಾರಂಭ :
ಯಾದಗಿರಿ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಮರುಳಸಿದ್ಧರಾಧ್ಯ ಅವರು ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಸಮಾರೋಪ ನುಡಿಗಳನ್ನಾಡುವರು. ಯಾದಗಿರಿ ಪರಿಷತ್ತಿನ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ ಕೃತಜ್ಞತಾ ನುಡಿಗಳನ್ನಾಡುವರು, ವೇದಿಕೆಯಲ್ಲಿ ಸಚಿವರು, ಶಾಸಕರು ಅನೇಕ ಗಣ್ಯರು ಉಪಸ್ಥಿತರಿರುವರು.
ಈ ಸಮ್ಮೇಳನಕ್ಕೆ ಭಾಗವಹಿಸುವ ಎಲ್ಲಾರಿಗೂ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ದೂರದ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಬರುವ ಆಹ್ವಾನಿತರಿಗೆ ವಸತಿ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ವಿವಿಧ ವಿಜ್ಞಾನ ಸಂಸ್ಥೆಗಳಿಂದ ವಿಜ್ಞಾನ ವಸ್ತು ಪ್ರದರ್ಶನ :
ಕರ್ನಾಟಕ ಹಾಗೂ ಭಾರತ ಸರ್ಕಾರದ 30ಕ್ಕೂ ಹೆಚ್ಚಿನ ವಿಜ್ಞಾನ ಸಂಸ್ಥೆಗಳಿಂದ ಮೈನವಿರೇಳಿಸುವ ವಿಜ್ಞಾನ ವಸ್ತು ಪ್ರದರ್ಶನ ಇದ್ದು, ವಿಜ್ಞಾನಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿಸ್ಮಯಗಳನ್ನು ನೋಡುವ ಸಂದರ್ಭ ಇದಾಗಿದೆ. ಬನ್ನಿ ಇಂತಹ ಅವಕಾಶ ಮತ್ತೆಂದು ದೊರಕದು ಇಂತಹ ಐತಿಹಾಸಿಕ ವೈಜ್ಞಾನಿಕ ಸಮ್ಮೇಳನಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ಸಾರ್ವಜನಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಶರಣಬಸವ ಕಲ್ಲಾ, ಜಿಲ್ಲಾ ಖಜಾಂಚಿ ನಾಗರಾಜ ಪಾಟೀಲ ಹುಳಗೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಅಶೋಕ ದೊಡ್ಡಮನಿ ಇತರರಿದ್ದರು.